ಬಂಡೆಗಳಿಂದ ಡೈವ್ ಮಾಡುವ ಸಾಹಸ ಕ್ರೀಡೆ ಎಂದರೆ ಯಾವಾಗಲೂ ಅಪಾಯವನ್ನು ಎದುರು ಹಾಕಿಕೊಳ್ಳುವ ಅಪಾಯಕಾರಿ ಪ್ರವೃತ್ತಿ. ಈ ಸಾಹಸ ಮಾಡಲು ಸಿಕ್ಕಾಪಟ್ಟೆ ತರಬೇತಿ ಇದ್ದು ಸಿಕ್ಕಾಪಟ್ಟೆ ಫಿಟ್ ಇರಬೇಕಾಗುತ್ತದೆ.
ಕೆಲವೊಮ್ಮೆ ಅದೆಷ್ಟೇ ತರಬೇತಿ ನಡೆಸಿದರೂ ಸಹ ಸ್ವಲ್ಪವೇ ಎಚ್ಚರ ತಪ್ಪಿದರೂ ಸಹ ಅಪಾಯ ಕಟ್ಟಿಟ್ಟ ಬುತ್ತಿ. ಅದೃಷ್ಟ ನಮ್ಮೊಂದಿಗಿದ್ದರೆ ಬದುಕಿ ಬಂದ ಕಥೆಯನ್ನು ಹೇಳಿಕೊಳ್ಳಬಹುದು.
ಕ್ಲಿಫ್ ಡೈವ್ ಮಾಡುವಾಗ 115 ಅಡಿ ಎತ್ತರದಿಂದ ನೆಗೆಯುವ ವೇಳೆ ವ್ಯಕ್ತಿಯೊಬ್ಬರು ಸ್ವಲ್ಪವೇ ಎಡವಟ್ಟು ಮಾಡಿಕೊಂಡ ವಿಡಿಯೋವೊಂದು ವೈರಲ್ ಆಗಿದೆ. ಆರಂಭದಲ್ಲಿ ಎಲ್ಲವೂ ಸರಿಯಾಗಿದೆ ಎಂದುಕೊಳ್ಳುವಷ್ಟರಲ್ಲಿ, ಜಂಪ್ ಮಾಡಿದ ಕೂಡಲೇ ಉಲ್ಟಾ ತಿರುವು ಪಡೆದುಕೊಂಡ ಜೇಸನ್ ಗ್ಲೀಸನ್ ದೇಹವು ಗಾಳಿಯಲ್ಲಿರುವಾಗ ನಿಯಂತ್ರಣ ತಪ್ಪಿದೆ. ಆಯ ತಪ್ಪಿದ ಅವರು ನೀರಿಗೆ ಬಿದ್ದಿದ್ದಾರೆ. ಅದೃಷ್ಟವಶಾತ್ ಜೇಸನ್ಗೆ ಯಾವುದೇ ದೊಡ್ಡ ಗಾಯಗಳಾಗಿಲ್ಲ.