alex Certify 19 ಲಕ್ಷ ಉದ್ಯೋಗ – ಉಚಿತ ಕೊರೊನಾ ಲಸಿಕೆ ಭರವಸೆ ನೀಡಿದ ಬಿಜೆಪಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

19 ಲಕ್ಷ ಉದ್ಯೋಗ – ಉಚಿತ ಕೊರೊನಾ ಲಸಿಕೆ ಭರವಸೆ ನೀಡಿದ ಬಿಜೆಪಿ

ಬಿಹಾರ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು ಮತದಾರರ ಓಲೈಕೆಗೆ ವಿವಿಧ ಪಕ್ಷಗಳು ಕಸರತ್ತನ್ನ ನಡೆಸುತ್ತಿವೆ. ಆಡಳಿತಾರೂಢ ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು ಇದರಲ್ಲಿ 19 ಲಕ್ಷ ಜನರಿಗೆ ಉದ್ಯೋಗಾವಕಾಶ ಹಾಗೂ ಜನತೆಗೆ ಉಚಿತವಾಗಿ ಕೊರೊನಾ ವೈರಸ್​​ ಲಸಿಕೆ ಕೊಡೋದಾಗಿ ಭರವಸೆ ನೀಡಿದೆ.

ಸಂಕಲ್ಪ ಪತ್ರ ಎಂಬ ಹೆಸರಲ್ಲಿ ಬಿಡುಗಡೆಯಾದ ಈ ಪ್ರಣಾಳಿಕೆಯಲ್ಲಿ 19 ಲಕ್ಷ ಜನರಿಗೆ ಉದ್ಯೋಗ ಅವಕಾಶ ನೀಡುವ ಭರವಸೆ ನೀಡಲಾಗಿದೆ. ಆರ್​ಜೆಡಿಯ ನಾಯಕ ತೇಜಸ್ವಿ ಯಾದವ್​ ತಮ್ಮ ಚುನಾವಣಾ ರ್ಯಾಲಿ ವೇಳೆ 10 ಲಕ್ಷ ಜನರಿಗೆ ಸರ್ಕಾರಿ ಉದ್ಯೋಗ ನೀಡುವ ಭರವಸೆ ನೀಡಿದ್ರು. ಇದೀಗ ಬಿಜೆಪಿ ಪ್ರಣಾಳಿಕೆಯಲ್ಲಿ 19 ಲಕ್ಷ ಜನರಿಗೆ ಉದ್ಯೋಗಾವಕಾಶ ನೀಡ್ತೇನೆ ಅಂತಾ ಹೇಳೋ ಮೂಲಕ ಆರ್​ಜೆಡಿಗೆ ಟಾಂಗ್​​ ನೀಡಿದೆ.

ಆದರೆ ಕರೊನಾ ಲಸಿಕೆ ಇನ್ನು ಪ್ರಯೋಗ ಹಂತದಲ್ಲಿ ಇರೋವಾಗಲೇ ಬಿಜೆಪಿ ಬಿಹಾರದ ಜನರಿಗೆ ಉಚಿತ ಕೋವಿಡ್​ ಲಸಿಕೆ ವಿತರಣೆ ಮಾಡುವ ಭರವಸೆ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...