alex Certify ಹ್ಯಾಲೋವೀನ್ ಸಂಭ್ರಮಕ್ಕೆ ಮೆರುಗು ಕೊಡುತ್ತಿವೆ ’ಟ್ರಂಪ್ಕಿನ್‌’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹ್ಯಾಲೋವೀನ್ ಸಂಭ್ರಮಕ್ಕೆ ಮೆರುಗು ಕೊಡುತ್ತಿವೆ ’ಟ್ರಂಪ್ಕಿನ್‌’

ಭೂತಗಳ ಆರಾಧನೆ ಮಾಡುವ ಹ್ಯಾಲೋವೀನ್ ಹಬ್ಬ ಸಮೀಪಿಸುತ್ತಲೇ ಅಮೆರಿಕಾದ್ಯಂತ ಸಂಭ್ರಮದ ವಾತಾವರಣ ನೆಲೆಸಿದೆ. ಇದೇ ವೇಳೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಮುಖವನ್ನೇ ಹೋಲುವ ಕುಂಬಳಕಾಯಿಗಳನ್ನು ’ಟ್ರಂಪ್ಕಿನ್’ ಎಂದು ಹೇಳಿಕೊಂಡು ಅವುಗಳ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿದೆ.

#Trumpkin ಟ್ಯಾಗ್‌ ಅಡಿಯಲ್ಲಿ ಈ ಚಿತ್ರಗಳನ್ನು ಅಮೆರಿಕ ಹಾಗೂ ಬ್ರಿಟನ್‌ ದೇಶಗಳ ಜನರು ಶೇರ್‌ ಮಾಡಿಕೊಂಡಿದ್ದಾರೆ. 2016ರಲ್ಲಿ ಮೊದಲ ಬಾರಿಗೆ ಟ್ರಂಪ್ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಫರ್ಧಿಸಿದ ವೇಳೆ ಇದೇ ರೀತಿ ಟ್ರೆಂಡ್‌ ಒಂದು ಚಾಲ್ತಿಯಲ್ಲಿತ್ತು.

ಕುಂಬಳಕಾಯಿಗೆ ವಿಗ್ ಹಾಗೂ ಟೈ ಧರಿಸುವ ಮೂಲಕ ಅವುಗಳನ್ನು ಟ್ರಂಪ್ ಮುಖದ ಹಾಗೆಯೇ ಕಾಣುವಂತೆ ಮಾಡಿ, “Make Halloween great again” ಎಂಬ ಬಾಟಮ್‌ಲೈನ್ ಮೂಲಕ, ಟ್ರಂಪ್ ಅವರ, “Make America great again,” ಸ್ಲೋಗನ್‌ಗೆ ಟ್ವಿಸ್ಟ್ ಕೊಟ್ಟಿದ್ದಾರೆ ಕೆಲವರು.

https://www.instagram.com/p/CGWzIQPnYrN/?utm_source=ig_web_copy_link

https://www.instagram.com/p/CGgXfQJjYLY/?utm_source=ig_web_copy_link

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...