ನವದೆಹಲಿ: ದೇಶದಲ್ಲಿ 40 ಕೋಟಿಗೂ ಅಧಿಕ ಜನ್ ಧನ್ ಖಾತೆಗಳಿದ್ದು, ಇವುಗಳಲ್ಲಿ ಹೆಚ್ಚಿನ ಖಾತೆಗಳನ್ನು ಮಹಿಳೆಯರು ಹೊಂದಿದ್ದಾರೆ.
ಗ್ರಾಮೀಣ ಪ್ರದೇಶದ ಶೇಕಡಾ 63 ರಷ್ಟು ಮಂದಿ ಜನ್ ಧನ್ ಖಾತೆ ಹೊಂದಿದ್ದಾರೆ. ಶೇಕಡಾ 36 ರಷ್ಟು ನಗರ ಪ್ರದೇಶದ ಮಂದಿ ಜನ್ ಧನ್ ಖಾತೆ ಹೊಂದಿದ್ದು, ಶೇಕಡಾ 55.2 ರಷ್ಟು ಮಹಿಳೆಯರು ಖಾತೆ ಹೊಂದಿದ್ದಾರೆ. 40.35 ಕೋಟಿ ಜನ್ ಧನ್ ಬ್ಯಾಂಕ್ ಖಾತೆಗಳು ಸಕ್ರಿಯವಾಗಿವೆ.
ಸೌಲಭ್ಯಗಳು:
ಸರಳೀಕೃತ ಕೆವೈಸಿ ಝೀರೋ ಬ್ಯಾಲೆನ್ಸ್ ಮೂಲಕ ಜನ್ ಧನ್ ಖಾತೆ ತೆರೆಯಬಹುದು. ಖಾತೆದಾರರಿಗೆ ಡೆಬಿಟ್ ಕಾರ್ಡ್ ಜೊತೆಗೆ ಎರಡು ಲಕ್ಷ ರೂಪಾಯಿವರೆಗೆ ಉಚಿತ ಅಪಘಾತ ವಿಮೆ ಸೌಲಭ್ಯ ಇರುತ್ತದೆ. ಮೈಕ್ರೋ ವಿಮೆ, ಓವರ್ ಡ್ರಾಫ್ಟ್ ಮೈಕ್ರೋ ಪಿಂಚಣಿ ಮತ್ತು ಮೈಕ್ರೋ ಕ್ರೆಡಿಟ್ ಸೌಲಭ್ಯಗಳು ಇರುತ್ತವೆ ಎಂದು ಹೇಳಲಾಗಿದೆ.