ಕೊರೊನಾ ಬಿಕ್ಕಟ್ಟಿನ ಮಧ್ಯೆಯೇ ಬ್ಯಾಂಕ್ ಗ್ರಾಹಕರಿಗೆ ಮತ್ತೊಂದು ಹೊಡೆತ ಬೀಳುವ ಸಾಧ್ಯತೆಯಿದೆ. ಬ್ಯಾಂಕ್ ಎಟಿಎಂನಿಂದ 5 ಸಾವಿರಕ್ಕಿಂತ ಹೆಚ್ಚು ಹಣ ವಿತ್ ಡ್ರಾ ಮಾಡಲು ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇದ್ರ ಬಗ್ಗೆ ಆಲೋಚನೆ ಮಾಡ್ತಿದೆ.
ಎಟಿಎಂ ಶುಲ್ಕವನ್ನು ಮರುಪರಿಶೀಲಿಸಲು ಆರ್‌ಬಿಐ ಸಮಿತಿಯನ್ನು ರಚಿಸಿದೆ. ಒಂದು ಸಮಯದಲ್ಲಿ ಐದು ಸಾವಿರ ರೂಪಾಯಿಗಳನ್ನು ವಿತ್ ಡ್ರಾ ಮಾಡಲು ಎಟಿಎಂಗಳಿಂದ ಶುಲ್ಕ ಸಂಗ್ರಹಿಸಲು ಸಮಿತಿ ಶಿಫಾರಸು ಮಾಡಿದೆ. ಗ್ರಾಹಕರು ಆನ್‌ಲೈನ್‌ನಲ್ಲಿ ಹೆಚ್ಚು ಹೆಚ್ಚು ವಹಿವಾಟು ನಡೆಸಬೇಕೆಂದು ಆರ್‌ಬಿಐ ಉದ್ದೇಶವಾಗಿದೆ. ದೊಡ್ಡ ನಗರಗಳಲ್ಲಿ ಎಟಿಎಂಗಳ ಸಂಖ್ಯೆಯನ್ನು ಕಡಿಮೆ ಮಾಡುವ ಮೂಲಕ, 10 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಸಣ್ಣ ಪಟ್ಟಣಗಳಲ್ಲಿ ಎಟಿಎಂ ಸಂಖ್ಯೆ ಹೆಚ್ಚಿಸಲು ಆರ್‌ಬಿಐ ನಿರ್ಧರಿಸಿದೆ.
ಸಮಿತಿಯ ಶಿಫಾರಸುಗಳನ್ನು ಅಂಗೀಕರಿಸಿದರೆ, ಎಟಿಎಂನಿಂದ ಏಕಕಾಲದಲ್ಲಿ 5 ಸಾವಿರಕ್ಕೂ ಹೆಚ್ಚು ಹಣವನ್ನು ವಿತ್ ಡ್ರಾ ಮಾಡಲು ಬ್ಯಾಂಕ್ ಗ್ರಾಹಕರಿಂದ 24 ರೂಪಾಯಿ ಹೆಚ್ಚುವರಿ ಶುಲ್ಕವನ್ನು ವಿಧಿಸಬಹುದು.