ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ ಪತಿ ಶೋ ಅತಿ ಹೆಚ್ಚು ವೀಕ್ಷಣೆಯಾಗ್ತಿರೋ ರಿಯಾಲಿಟಿ ಶೋಗಳ ಪೈಕಿ ಮುಂಚೂಣಿ ಸ್ಥಾನವನ್ನೇ ಪಡೆದಿದೆ. ಮಂಗಳವಾರದ ಶೋನಲ್ಲಿ ಛತ್ತೀಸಗಢದ ಬ್ಯಾಂಕ್ ಉದ್ಯೋಗಿ ಅಂಕಿತಾ ಸಿಂಗ್ ಹಾಟ್ ಸೀಟ್ನಲ್ಲಿ ಕೂತಿದ್ದಾರೆ.
12,50,000 ರೂಪಾಯಿ ಗಳಿಸಿದ್ದ ಅಂಕಿತಾಗೆ ಬಿಗ್ ಬಿ 25,00,000 ರೂಪಾಯಿ ಮೌಲ್ಯದ ಸವಾಲನ್ನ ಕೇಳಿದ್ರು. ಆದ್ರೆ ಈ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗದ ಕಾರಣ ಅಂಕಿತಾ 12,50,000 ರೂಪಾಯಿಗೆ ತೃಪ್ತಿ ಪಡೋ ಹಾಗಾಯ್ತು.
25 ಲಕ್ಷ ರೂಪಾಯಿಗೆ ಭಾರತದಲ್ಲಿ ಎಫ್ 16 ಫಾಲ್ಕೋನ್ ಯುದ್ಧ ವಿಮಾನ ಹಾರಿಸಿದ ಮೊದಲ ಭಾರತೀಯ ನಾಗರಿಕ ಯಾರು ಎಂಬ ಪ್ರಶ್ನೆಯನ್ನ ಕೇಳಲಾಗಿತ್ತು. ಇದಕ್ಕೆ ಜೆಆರ್ಡಿ ಟಾಟಾ, ರತನ್ ಟಾಟಾ, ರಾಜೀವ್ ಗಾಂಧಿ ಹಾಗೂ ರಾಜೇಶ್ ಪೈಲಟ್ ಎಂಬ ಆಯ್ಕೆಗಳನ್ನ ನೀಡಲಾಗಿತ್ತು.
The question was: Who was the first Indian civilian to fly the F16 Falcon fighter aircraft in India?
Options: (A) JRD Tata (B) Ratan Tata (C) Rajiv Gandhi (D) Rajesh Pilot
ಈ ಪ್ರಶ್ನೆಗೆ ಸರಿಯಾದ ಉತ್ತರ ರತನ್ ಟಾಟಾ ಆಗಿದೆ.