ಹೃದಯವೆನೋ ಪುಟ್ಟದ್ದೇ, ಅದರೆ ಅದು ಸರಿಯಾಗಿ ಕೆಲಸ ನಿರ್ವಹಿಸದಿದ್ದರೆ ಕಾಡುವ ಸಮಸ್ಯೆಗಳು ಒಂದೆರಡಲ್ಲ. ಇದನ್ನು ಆರೋಗ್ಯಪೂರ್ಣವಾಗಿ ನೋಡಿಕೊಳ್ಳುವುದು ಬಹಳ ಮುಖ್ಯ.
ದಿನಕ್ಕೆ 30 ರಿಂದ 60 ನಿಮಿಷ ವ್ಯಾಯಾಮಕ್ಕಾಗಿ ಮೀಸಲಿಡಿ. ಇದು ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ. ಹೆಚ್ಚಿನ ವ್ಯಾಯಾಮ ಮಾಡಬೇಕಿಲ್ಲ. ಸ್ವಲ್ಪ ವಾಕಿಂಗ್, ಕೈಕಾಲು ಮಡಿಚಿ ಬಿಡಿಸುವ ಉದ್ದಕ್ಕೆ ಚಾಚುವ ಕೆಲವು ಎಕ್ಸಸೈಸ್ ಮಾಡಿದರೆ ಸಾಕು.
ಎಣ್ಣೆ ತಿಂಡಿ ತಿನ್ನಲು ವಾರದಲ್ಲಿ ಒಂದು ದಿನ ಮೀಸಲಿಡಿ. ಊಟದಲ್ಲಿ ಸಾಕಷ್ಟು ಪ್ರಮಾಣದ ಹಣ್ಣು, ತರಕಾರಿಗಳಿರಲಿ. ಎಣ್ಣೆ ಪದಾರ್ಥಗಳನ್ನು ದೂರವಿಡಿ. ಸೊಪ್ಪು ಧಾನ್ಯ ಸೇವಿಸಿ. ಮದ್ಯಪಾನದಿಂದ ದೂರವಿರಿ.
ವಯಸ್ಸಾದಂತೆ ತೂಕ ಹೆಚ್ಚುವುದು ಸಾಮಾನ್ಯ. ಹೃದಯದ ಆರೋಗ್ಯ ಕಾಪಾಡಲು ತೂಕ ಹೆಚ್ಚದಂತೆ ನೋಡಿಕೊಳ್ಳಿ. ನಿದ್ದೆ ಕಡಿಮೆಯಾದಷ್ಟು ಆತಂಕ ಹೆಚ್ಚು. ಹಾಗಾಗಿ ಸಾಕಷ್ಟು ನಿದ್ದೆ ಮಾಡಿ. ಸಂತಸದಿಂದಿರಿ.