ಬೆಂಗಳೂರಿನಲ್ಲಿ ಪರಿಸರ ಸಂರಕ್ಷಣೆ ಎಷ್ಟರ ಮಟ್ಟಿಗೆ ಆಗ್ತಿದೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಸರ್ಕಾರಿ ಏಜನ್ಸಿಗಳೇ ಬೆಂಗಳೂರಿನ ಹಸಿರು ಪ್ರದೇಶವನ್ನ ಹಾಳು ಮಾಡ್ತಾ ಇದ್ದ ಸಂದರ್ಭದಲ್ಲಿ ಬಿಬಿಎಂಪಿ ಜೊತೆ ಸೇರಿಕೊಂಡ ಇಂದಿರಾ ನಗರದ ಕೆಲ ನಾಗರಿಕರು ಒಂದಷ್ಟು ಗಿಡಗಳನ್ನ ನೆಟ್ಟಿದ್ರು. ಆದರೆ ಪರಿಸರ ಉಳಿಸಲು ಹೋದವರ ವಿರುದ್ಧವೇ ಇದೀಗ ಪ್ರಕರಣ ದಾಖಲಾಗಿದೆ ಎಂಬ ಆಘಾತಕಾರಿ ವಿಚಾರ ಹೊರಬಿದ್ದಿದೆ.
ಐ ಚೇಂಜ್ ಇಂದಿರಾನಗರದ ಸಂಘದ ಸದಸ್ಯರು ಅಕ್ಟೋಬರ್ 2ರಂದು 100 ಫೀಟ್ ರೋಡ್ನಲ್ಲಿ ಮರಗಳನ್ನ ನೆಡುವ ಅಭಿಯಾನವನ್ನ ಶುರು ಮಾಡಿದ್ರು. ಈ ಕಾರ್ಯಕ್ರಮ ನಡೆಯುದಕ್ಕೂ ಒಂದು ದಿನ ಮೊದಲು ನೋ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಲಾದ ವಾಹನಗಳನ್ನ ಪರಿಸರ ಪ್ರೇಮಿಗಳು ಪೊಲೀಸರ ಸಹಾಯದಿಂದ ತೆರವುಗೊಳಿಸಿದ್ರು. ಆದರೆ ಇದು ಟ್ರಾಫಿಕ್ ಪೊಲೀಸ್ ವರಿಷ್ಠಾಧಿಕಾರಿಯೊಬ್ಬರಿಗೆ ಇಷ್ಟವಾಗಿರಲಿಲ್ಲ. ಹೀಗಾಗಿ ನಮ್ಮ ವಿರುದ್ಧ ದೂರು ದಾಖಲಿಸೋಕೆ ಇದೇ ಅಧಿಕಾರಿ ಒತ್ತಡ ಹೇರಿದ್ದಾರೆ ಅನ್ನೋದು ಐ ಚೇಂಜ್ ಇಂದಿರಾನಗರ ಸದಸ್ಯರ ಆರೋಪವಾಗಿದೆ.
ಅಲ್ಲದೇ ದೂರು ದಾಖಲಿಸಿರುವ ಬಿಬಿಎಂಪಿ ಇಂಜಿನಿಯರ್ನ ಕಾರ್ಯಾಲಯ ದೊಮ್ಮಲೂರು ವಾರ್ಡ್ಗೆ ಬರುತ್ತೆ. ಇವರಿಗೂ ಇಂದಿರಾನಗರಕ್ಕೂ ಯಾವುದೇ ಸಂಬಂಧ ಇಲ್ಲ. ಇನ್ನು ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರೋ ದೊಮ್ಮಲೂರು ಇಂಜಿನಿಯರ್, ಸಸಿ ನೆಡುವ ನೆಪದಲ್ಲಿ ಸಂಘದ ಸದಸ್ಯರು ಫುಟ್ಪಾತ್ಗಳನ್ನ ಹಾನಿ ಮಾಡಿದ್ದಾರೆ. ಇದು ಪಾದಚಾರಿಗಳಿಗೆ ತೊಂದರೆ ಉಂಟು ಮಾಡ್ತಿದೆ. ಹೀಗಾಗಿ ದೂರು ನೀಡಿದ್ದೇವೆ ಅಂತಾ ಹೇಳಿದ್ರು.