ಕೊರೊನಾ ಸಂದರ್ಭದಲ್ಲಿ ಆನ್ಲೈನ್ ಶಾಪಿಂಗ್ ಹೆಚ್ಚಾಗಿದೆ. ಜನರು ಕೊರೊನಾದಿಂದ ರಕ್ಷಣೆ ಪಡೆಯಲು ಸುರಕ್ಷಿತ ಶಾಪಿಂಗ್ ಮೊರೆ ಹೋಗಿದ್ದಾರೆ. ಆನ್ಲೈನ್ ಶಾಪಿಂಗ್ ಜೊತೆ ಆನ್ಲೈನ್ ಪೇಮೆಂಟ್ ಕೂಡ ಹೆಚ್ಚಾಗಿದೆ. ಇದೇ ಕಾರಣಕ್ಕೆ ಅನೇಕ ಉದ್ಯೋಗಿಗಳು ತಮ್ಮ ಪತ್ನಿಯ ಖಾತೆಗೆ ಮನೆ ವಸ್ತುಗಳ ಖರೀದಿಗಾಗಿ ಹಣ ವರ್ಗಾವಣೆ ಮಾಡ್ತಿದ್ದಾರೆ. ಈ ಹಣಕ್ಕೆ ಸಂಬಂಧಿಸಿದಂತೆ ಪತ್ನಿಗೆ ನೋಟೀಸ್ ಬರುತ್ತಾ ಎಂಬ ಪ್ರಶ್ನೆ ಏಳುವುದು ಸಹಜ.
ಸಾಮಾನ್ಯವಾಗಿ ಗಂಡ, ಪತ್ನಿ ಖಾತೆಗೆ ವಸ್ತುಗಳ ಖರೀದಿಗೆ ಹಣ ವರ್ಗಾವಣೆ ಮಾಡಿದ್ರೆ, ಪತ್ನಿ ಅದನ್ನು ವಸ್ತುಗಳ ಖರೀದಿಗೆ ಬಳಕೆ ಮಾಡಿದ್ರೆ ತೆರಿಗೆ ಪಾವತಿಸಬೇಕಾಗಿಲ್ಲ. ಒಂದು ವೇಳೆ ಈ ಹಣವನ್ನು ಪತ್ನಿ ಹೂಡಿಕೆ ಮಾಡಿ ಅದ್ರಿಂದ ಬರುವ ಹಣವನ್ನು ಮತ್ತೆ ಹೂಡಿಕೆ ಮಾಡಿದ್ರೆ ಅದಕ್ಕೆ ತೆರಿಗೆ ಪಾವತಿ ಮಾಡಬೇಕಾಗುತ್ತದೆ.
ಆದಾಯ ತೆರಿಗೆ ಕಾನೂನಿನ ಪ್ರಕಾರ, ನಿಮ್ಮ ಆದಾಯವನ್ನು ಹೊರತುಪಡಿಸಿ ಉಡುಗೊರೆಯಾಗಿ ನಿಮ್ಮ ಹೆಂಡತಿಗೆ ಹಣವನ್ನು ನೀಡಿದರೆ, ಅದು ಕಾನೂನುಬದ್ಧವಾಗಿ ತಪ್ಪಲ್ಲ. ಆದ್ರೆ ನೀವು ಅದರ ಮೇಲೆ ಯಾವುದೇ ರೀತಿಯ ತೆರಿಗೆ ರಿಯಾಯಿತಿ ಪಡೆಯುವುದಿಲ್ಲ. ಆದಾಯ ತೆರಿಗೆ ಕಾಯ್ದೆಯಡಿ, ನಿಮ್ಮ ಹೆಂಡತಿಗೆ ಉಡುಗೊರೆಯಾಗಿ ಹಣವನ್ನು ನೀಡಿದರೆ, ಅದನ್ನು ನಿಮ್ಮ ಆದಾಯವೆಂದು ಪರಿಗಣಿಸಲಾಗುತ್ತದೆ ಮತ್ತು ತೆರಿಗೆ ಹೊಣೆಗಾರಿಕೆ ಸಹ ನಿಮ್ಮ ಮೇಲೆ ಇರುತ್ತದೆ.
ಪ್ರತಿ ತಿಂಗಳು ನಿಮ್ಮ ಹೆಂಡತಿಯ ಖಾತೆಗೆ ಸ್ವಲ್ಪ ಮೊತ್ತವನ್ನು ಹಾಕಿದರೆ ಮತ್ತು ಅವಳು ಹಣವನ್ನು ಎಸ್ಐಪಿ ಮೂಲಕ ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಮಾಡುತ್ತಿದ್ದರೆ, ಅವರು ಈ ಹಣದ ಮೇಲೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಅಗತ್ಯವಿಲ್ಲ. ಅವರು ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ. ಈ ಹಣ ಹೂಡಿಕೆಯಿಂದ ಬರುವ ಆದಾಯವನ್ನು ಗಂಡನ ತೆರಿಗೆಯ ಆದಾಯಕ್ಕೆ ಸೇರಿಸಲಾಗುತ್ತದೆ. ಪತ್ನಿ ಗಳಿಕೆಯನ್ನು ಮರು ಹೂಡಿಕೆ ಮಾಡುವುದರಿಂದ ಬರುವ ಆದಾಯದ ಮೇಲೆ ಹೆಂಡತಿ ಆದಾಯ ತೆರಿಗೆ ಪಾವತಿಸಬೇಕಾಗುತ್ತದೆ.