ನವದೆಹಲಿ: ಅಭಿವೃದ್ಧಿ ದೇಶಗಳಿಗೆ ಹೋಲಿಸಿದರೆ ನಾವು ಉತ್ತಮ ಸ್ಥಿತಿಯಲ್ಲಿದ್ದೇವೆ. ಪೂರ್ಣ ಪ್ರಮಾಣದ ಯಶಸ್ಸು ಸಿಗುವವರೆಗೂ ಅತಿಯಾದ ಆತ್ಮವಿಶ್ವಾಸ ಬೇಡ ಕೊರೋನಾ ವ್ಯಾಕ್ಸಿನ್ ಬರುವವರೆಗೂ ಉದಾಸಿನ ಬೇಡ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ದೇಶವನ್ನುದ್ದೇಶಿಸಿ ಇಂದು ಭಾಷಣ ಮಾಡಿದ ಮೋದಿ, ಮನುಷ್ಯ ಸಂಕುಲವೇ ಕೊರೋನಾ ವಿರುದ್ಧ ಹೋರಾಡುತ್ತಿದೆ. ಭಾರತದಲ್ಲಿ ಪ್ರತಿ 10 ಲಕ್ಷ ಸೋಂಕಿತರಲ್ಲಿ ಸಾವಿನ ಸಂಖ್ಯೆ 83 ರಷ್ಟು ಇದೆ. ಅನೇಕ ದೇಶದಲ್ಲಿ ಸಾವಿನ ಪ್ರಮಾಣ 600 ಕ್ಕೂ ಹೆಚ್ಚು. ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ನಾವು ಉತ್ತಮ ಸ್ಥಿತಿಯಲ್ಲಿದ್ದೇವೆ ಎಂದು ತಿಳಿಸಿದ್ದಾರೆ.
ಪೂರ್ಣ ಪ್ರಮಾಣದ ಯಶಸ್ಸು ಸಿಗುವವರೆಗೂ ಅತಿಯಾದ ಆತ್ಮವಿಶ್ವಾಸ ಬೇಡವೆಂದು ಅವರು ಹೇಳಿದ್ದು, ಲಸಿಕೆ ಬರುವವರೆಗೂ ಕೊರೋನಾ ಬಗ್ಗೆ ನಿರ್ಲಕ್ಷ್ಯ ತೋರಬೇಡಿ. ಭಾರತದಲ್ಲಿ 10 ಲಕ್ಷಕ್ಕೆ 83 ಜನ ಸಾವಿಗೀಡಾಗುತ್ತಿದ್ದಾರೆ ಸಾವಿನ ಪ್ರಮಾಣ ನಮ್ಮ ದೇಶದಲ್ಲಿ ಕಡಿಮೆ ಇದೆ. ಅಮೆರಿಕ, ಬ್ರೆಜಿಲ್ ನಲ್ಲಿ 600 ಕ್ಕೂ ಹೆಚ್ಚು ಸಾವಿನ ಪ್ರಕರಣಗಳು ಇವೆ ಎಂದು ಹೇಳಿದ್ದಾರೆ.
ದೇಶದಲ್ಲಿ 2000ಕ್ಕೂ ಹೆಚ್ಚು ಲ್ಯಾಬ್ ಗಳು ಕಾರ್ಯನಿರ್ವಹಿಸುತ್ತಿವೆ. ಕೊರೋನಾ ಟೆಸ್ಟ್ ಹೆಚ್ಚಳ ನಮ್ಮ ದೇಶದ ಶಕ್ತಿಯಾಗಿದೆ. ಲಾಕ್ ಡೌನ್ ತೆರವಾಗಿರಬಹುದು. ಆದರೆ, ವೈರಸ್ ತೆರವಾಗಿಲ್ಲ. ಕೊರೋನಾ ವಾರಿಯರ್ಸ್ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಭಾರತದಲ್ಲಿ ಕೊರೋನಾ ವ್ಯಾಕ್ಸಿನ್ ಗಳ ಪ್ರಯೋಗ ನಡೆಯುತ್ತಿದೆ. ಪ್ರತಿಯೊಬ್ಬರಿಗೂ ವ್ಯಾಕ್ಸಿನ್ ಸಿಗುವುದಕ್ಕೆ ಶ್ರಮ ವಹಿಸುತ್ತಿದ್ದೇವೆ. ಎಲ್ಲಿಯವರೆಗೆ ವ್ಯಾಕ್ಸಿನ್ ಬರುವುದಿಲ್ಲವೋ ಅಲ್ಲಿಯವರೆಗೆ ಎಚ್ಚರಿಕೆಯಿಂದ ಇಬೇಕೆಂದು ಸಲಹೆ ನೀಡಿದ್ದಾರೆ.