ಬೆಂಗಳೂರು: ಸ್ಯಾಂಡಲ್ ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಾಗಿದೆ.
ರಿಚ್ಚಿ ಚಿತ್ರದ ಟೈಟಲ್ ವಿವಾದ ಇದೀಗ ಚಲನಚಿತ್ರ ವಾಣಿಜ್ಯ ಮಂಡಳಿ ಮೆಟ್ಟಿಲೇರಿದ್ದು, ರಕ್ಷಿತ್ ಶೆಟ್ಟಿಗಿಂತ ಮೊದಲೇ ರಿಚ್ಚಿ ಹೆಸರಲ್ಲಿ ಟೈಟಲ್ ನೋಂದಣಿ ಮಾಡಿಸಿದ್ದೆ. ಟೈಟಲ್ ಘೋಷಣೆ ಕೂಡ ಆಗಿದೆ, ಅಷ್ಟೇ ಅಲ್ಲ ಈಗಾಗಲೇ ರಿಚ್ಚಿ ಚಿತ್ರದ ಶೇ.70ರಷ್ಟು ಚಿತ್ರೀಕರಣ ಮುಗಿದಿದೆ. ಆದರೆ ಇದೀಗ ರಕ್ಷಿತ್ ಕೂಡ ಇದೇ ಟೈಟಲ್ ನಲ್ಲಿ ಸಿನಿಮಾ ಮಾಡುತ್ತಿದ್ದಾರೆ ಎಂದು ದೂರು ನೀಡಿದ್ದಾರೆ.
ರಿಚ್ಚಿ ರಕ್ಷಿತ್ ಶೆಟ್ಟಿ ಸಿನಿಮಾ ಎಂದು ಬಿಂಬಿತವಾಗುತ್ತಿದೆ. ಎರಡು ವರ್ಷಗಳ ಹಿಂದೆಯೇ ನಾನು ಟೈಟಲ್ ನೋಂದಣಿ ಮಾಡಿಸಿದ್ದೆ. ರಕ್ಷಿತ್ ಶೆಟ್ಟಿ ರಿಚ್ಚಿ ಟೈಟಲ್ ನ್ನು ವಾಪಸ್ ಪಡೆಯಬೇಕು ಎಂದು ನಿರ್ದೇಶಕ ಹೇಮಂತ್ ಹೇಳಿದ್ದಾರೆ.