ಜನಸಾಮಾನ್ಯನ ಗುರುತಾದ ಆಧಾರ್ ಕಾರ್ಡ್ನ್ನ ನಿಭಾಯಿಸುತ್ತಿರುವ ಯುಐಡಿಎಐ ಜನತೆಗೆ ಹೊಸ ಸೌಲಭ್ಯವೊಂದನ್ನ ನೀಡಿದೆ. ಇದರ ಸಹಾಯದಿಂದ ದೇಶದ ಜನತೆಗೆ ತಮ್ಮ ನೋಂದಾಯಿತ ನಂಬರ್ನ್ನ ತಾವೇ ಪರಿಶೀಲನೆ ಮಾಡಬಹುದಾಗಿದೆ. ಹಾಗೂ ಇನ್ನೊಬ್ಬ ವ್ಯಕ್ತಿಯ ಗುರುತನ್ನ ಪರಿಶೀಲನೆ ಮಾಡಲೂ ಕೂಡ ಈ ಸೌಲಭ್ಯವನ್ನ ಬಳಸಿಕೊಳ್ಳಬಹುದಾಗಿದೆ.
UIDAI ವೆಬ್ಸೈಟ್(uidai.gov.in) ಗೆ ಭೇಟಿ ನೀಡಿ. ಅಲ್ಲಿರುವ ಸೇವೆಗಳ ವಿಭಾಗದಲ್ಲಿ ‘ಆಧಾರ್ ಸಂಖ್ಯೆ ಪರಿಶೀಲಿಸಿ’ ಆಯ್ಕೆಯನ್ನ ಆಯ್ಕೆ ಮಾಡಿಕೊಳ್ಳಿ.
ಇದಾದ ಬಳಿಕ ಪರಿಶೀಲನೆ ಮಾಡಬೇಕು ಎಂದುಕೊಂಡಿರುವ ಆಧಾರ್ ಸಂಖ್ಯೆಯನ್ನ ನಮೂದಿಸಿ. ಆಧಾರ್ ವೆಬ್ಸೈಟ್ನಲ್ಲಿ ಕೇಳಲಾಗುವ ಲಿಂಗ, ವಯಸ್ಸು, ಹೆಸರು ಹಾಗೂ ನೋಂದಾಯಿತ ಮೊಬೈಲ್ ಸಂಖ್ಯೆ ಹೀಗೆ ಕೇಳಿರುವ ಎಲ್ಲ ವಿವರಗಳನ್ನ ಒದಗಿಸಿ.
ಇದಾದ ಬಳಿಕ ಆಧಾರ್ ನಂಬರ್ ಹೊಂದಿರುವ ವ್ಯಕ್ತಿಯ ಫೋಟೋ ನಿಮ್ಮ ಮೊಬೈಲ್ ಸ್ಕ್ರೀನ್ನಲ್ಲಿ ಕಾಣುತ್ತೆ. ಅಲ್ಲದೇ mAadhaar ನಲ್ಲಿ “QR ಕೋಡ್ ಸ್ಕ್ಯಾನ್’ನ್ನ ನೀಡಲಾಗುತ್ತೆ. ಇದನ್ನ ಸ್ಕ್ಯಾನ್ ಮಾಡುವ ಮೂಲಕ ವ್ಯಕ್ತಿಯ ಗುರುತು ಸತ್ಯವೋ ಸುಳ್ಳೋ ಎಂಬುದನ್ನ ನೀವು ಪತ್ತೆ ಹಚ್ಚಬಹುದಾಗಿದೆ .