ವೈದ್ಯಕೀಯ ಪ್ರವೇಶಾತಿ ಪರೀಕ್ಷೆಯಲ್ಲಿ 720ಕ್ಕೆ 0 ಅಂಕ ಬಂದ ಕಾರಣ ಮಹಾರಾಷ್ಟ್ರದ ವಿದ್ಯಾರ್ಥಿನಿಯೊಬ್ಬರು ಮುಂಬೈ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾಳೆ. ಕಡಿಮೆ ಅಂದರೂ 650 ಅಂಕ ಬರಬಹುದು ಎಂದುಕೊಂಡಿದ್ದ ವಿದ್ಯಾರ್ಥಿನಿ 0 ಅಂಕ ಪಡೆದ ಕಾರಣ ನನ್ನ ಉತ್ತರ ಪತ್ರಿಕೆಯನ್ನ ಮರುಮೌಲ್ಯಮಾಪನ ಮಾಡಬೇಕೆಂದು ಆಗ್ರಹಿಸಿ ಅರ್ಜಿ ಸಲ್ಲಿಸಿದ್ದಾಳೆ.
ಶುಕ್ರವಾರ ಪ್ರಕಟವಾದ ನೀಟ್ ಫಲಿತಾಂಶದಲ್ಲಿ 720ಕ್ಕೆ 720 ಅಂಕ ಪಡೆಯುವ ಮೂಲಕ ಶೋಯೆಬ್ ಅಫ್ತಬ್ ಮೊದಲ ಅಂಕ ಪಡೆದಿದ್ರೆ 720 ಅಂಕ ಪಡೆದಿದ್ದ ಆಕಾಂಕ್ಷಾ ಸಿಂಗ್ ವಯಸ್ಸಿನಲ್ಲಿ ಚಿಕ್ಕವರಾದ ಕಾರಣ 2ನೇ ಅಂಕಕ್ಕೆ ತೃಪ್ತಿ ಪಟ್ಟಿದ್ರು.
ಆದರೆ ಇದೀಗ ವಸುಂಧರಾ ಭೋಜನೆ ಎಂಬ ವಿದ್ಯಾರ್ಥಿನಿ ನನಗೆ 0 ಅಂಕ ಬಂತು ಎಂಬ ಕಾರಣಕ್ಕೆ ಕೋರ್ಟ್ ಮೆಟ್ಟಿಲೇರಿದ್ದಾಳೆ.
ಈ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎ. ಎಸ್ ಚಂದ್ರಶೇಖರ್ ಹಾಗೂ ಎನ್ವಿ ಸೂರ್ಯವಂಶಿ ನೇತೃತ್ವದ ಪೀಠ ರಾಷ್ಟ್ರೀಯ ಪರೀಕ್ಷಾ ಮಂಡಳಿ ಹಾಗೂ ಕೇಂದ್ರ ಆರೋಗ್ಯ ಹಾಗೂ ಮಾನವ ಸಂಪನ್ಮೂಲ ಇಲಾಖೆಗೆ ನೋಟಿಸ್ ನೀಡಿದೆ. ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಇರೋದಿಲ್ಲ. ಹೀಗಾಗಿ ವಿದ್ಯಾರ್ಥಿನಿ ಕೋರ್ಟ್ ಮೆಟ್ಟಿಲೇರಿದ್ದಾಳೆ.