ಪೆರು: ಗುಡ್ಡವೊಂದರ ಮೇಲೆ ಬಿಡಿಸಿದ 2,200 ವರ್ಷಗಳಷ್ಟು ಹಳೆಯದಾದ ಬೃಹತ್ ಬೆಕ್ಕಿನ ಚಿತ್ರ ಪತ್ತೆಯಾಗಿದೆ. ಅದರ ಚಿತ್ರ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಲಾಸ್ಕಾದಿಂದ ಅರ್ಜಂಟೀನಾಕ್ಕೆ ಹೋಗುವ ಪ್ಯಾನ್ ಅಮೆರಿಕಾ ಹೆದ್ದಾರಿ ಪಕ್ಕದ ನಾಸ್ಕಾ ಲಿನೇಜ್ ನಲ್ಲಿ ಕಲ್ಲಿನ ಗುಡ್ಡದ ಮೇಲೆ ಈ ಚಿತ್ರವಿದೆ. 1927 ರಲ್ಲಿ ಮೊದಲ ಬಾರಿಗೆ ಇದನ್ನು ಪುರಾತತ್ವ ಶಾಸ್ತ್ರಜ್ಞರು ಕಂಡು ಹಿಡಿದಿದ್ದರು. ಗಿಡ ಗಂಟಿಗಳಿಂದ ಕೂಡಿದ್ದ ಇದನ್ನು ಪೆರು ಪುರಾತತ್ವ ಶಾಸ್ತ್ರಜ್ಞರು ಮತ್ತೆ ಹುಡುಕಿ ಸಂರಕ್ಷಿಸಲು, ಸಾರ್ವಜನಿಕರ ವೀಕ್ಷಣೆಗೆ ಅನುವು ಮಾಡಿಕೊಡಲು ಮುಂದಾಗಿದ್ದಾರೆ.
12 ರಿಂದ 15 ಇಂಚ್ ಗೆರೆಯಲ್ಲಿ 121 ಅಡಿ ಉದ್ದದ ಬೆಕ್ಕಿನ ಚಿತ್ರವನ್ನು ರಚಿಸಲಾಗಿದೆ. ಕ್ರಿ.ಪೂ.500 ರಿಂದ ಕ್ರಿ.ಶಕ 200 ರ ನಡುವೆ ಈ ಚಿತ್ರ ಬಿಡಿಸಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪೆರು ಸಾಂಸ್ಕೃತಿಕ ಮಂತ್ರಾಲಯ ಈ ಸಂಬಂಧ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಗುಡ್ಡದ ಇಳಿಜಾರಿನಲ್ಲಿರುವ ಚಿತ್ರ ನಿರಂತರ ಮಳೆ, ಬಿಸಿಲಿಗೆ ಸಿಲುಕಿ ನಾಶವಾಗುವ ಹಂತದಲ್ಲಿದ್ದು, ಅದರ ಸಂರಕ್ಷಣೆಗೆ ಪುರಾತತ್ವ ಶಾಸ್ತ್ರಜ್ಞರು ಪ್ರಯತ್ನ ನಡೆಸಿದ್ದಾರೆ.