ಬಾಲಿವುಡ್ ನಟ ರಾಜಕುಮಾರ್ ರಾವ್ ವಿಚಿತ್ರ ಕಾರ್ಯವೊಂದನ್ನು ಮಾಡುತ್ತಿರುವ ಫೋಟೋವೊಂದು ಜಾಲತಾಣದಲ್ಲಿ ವೈರಲ್ ಆಗಿದೆ.
ಉಡಾನ್, ಲುಟೇರಾ ಮುಂತಾದ ಚಿತ್ರಗಳನ್ನು ನೀಡಿದ ಚಿತ್ರ ನಿರ್ಮಾಪಕ ವಿಕ್ರಮಾದಿತ್ಯ ಮೋಟ್ವಾನೆ ಅವರು ಐದು ವರ್ಷದ ಹಿಂದೆ ಬಿಡುಗಡೆಯಾದ ತಮ್ಮ “ಟ್ರ್ಯಾಪ್ಡ್” ಸಿನೆಮಾದ ಅಳಿಸಲಾದ ಈ ಸೀನ್ ನ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಸೋಮವಾರ ಹಂಚಿಕೊಂಡಿದ್ದಾರೆ.
“2016 ರಲ್ಲಿ ಈ ದಿನ ಚಿತ್ರಿಸಲಾದ ಹಾಗೂ ಅಳಿಸಲಾದ ಟ್ರ್ಯಾಪ್ಡ್ ಚಿತ್ರದ ಸೀನ್” ಎಂದು ಮೊಟ್ವಾನೆ ಅವರು ತಾವು ಅಪ್ ಲೋಡ್ ಮಾಡಿದ ಫೋಟೋಕ್ಕೆ ಕ್ಯಾಪ್ಶನ್ ನೀಡಿದ್ದಾರೆ. ಫೋಟೋದಲ್ಲಿ ರಾವ್ ಚಿಂತಾಕ್ರಾಂತರಾಗಿ ಕೋಣೆಯೊಳಗೆ ಕುಳಿತು ಕಾಂಡೋಮ್ ಬಾಯಲ್ಲಿ ಇಟ್ಟುಕೊಂಡಿರುವುದನ್ನು ಚಿತ್ರೀಕರಿಸಲಾಗುತ್ತಿದೆ.
ಅವರು ಯಾಕೆ ಕಾಂಡೋಮ್ ಇಟ್ಟುಕೊಂಡಿದ್ದಾರೆ ಎಂದು ಸೆನ್ಸಾರ್ ಬೋರ್ಡ್ ನವರು ಕೇಳಿದರು. ಚಿತ್ರದ ಸೀನ್ ಪ್ರಕಾರ ಅವರಿಗೆ ಒಂದು ದಿನದಿಂದ ಊಟ, ತಿಂಡಿ ಸಿಕ್ಕಿಲ್ಲ. ಇದರಿಂದ ಸ್ಟ್ರಾಬೆರಿ ಫ್ಲೇವರ್ ಹೊಂದಿರುವ ಕಾಂಡೋಮ್ ಚೀಪುತ್ತಿದ್ದಾರೆ ಎಂದೆ. ಆ ಸೀನ್ ಡಿಲಿಟ್ ಮಾಡುವಂತೆ ಬೋರ್ಡ್ ನವರು ಸೂಚಿಸಿದರು ಎಂದು ಮೊಟ್ವಾನೆ ಬರೆದುಕೊಂಡಿದ್ದಾರೆ.
ಟ್ರ್ಯಾಪ್ಡ್ ಚಿತ್ರದಲ್ಲಿ ನಾಯಕ ರಾಜಕುಮಾರ್ ರಾವ್ ಒಬ್ಬ ಕಾಲ್ ಸೆಂಟರ್ ಉದ್ಯೋಗಿ. ತನ್ನ ಅಪಾರ್ಟ್ಮೆಂಟ್ ನಲ್ಲಿ ಊಟ, ನೀರು ಇಲ್ಲದೆ ಸಿಕ್ಕಿ ಹಾಕಿಕೊಳ್ಳುವ ಡ್ರಾಮೆಟಿಕ್ ಕತೆಯಿದೆ. ಚಿತ್ರಕ್ಕೆ ವಿಮರ್ಶಕರ ಉತ್ತಮ ಚಿತ್ರ ಪ್ರಶಸ್ತಿ, ರಾಜಕುಮಾರ್ ರಾವ್ ಗೆ ಉತ್ತಮ ನಟ ಫಿಲ್ಮ್ ಫೇರ್ ಪ್ರಶಸ್ತಿಯೂ ಲಭಿಸಿದೆ.
https://www.instagram.com/p/CGeugZ-J_uP/?utm_source=ig_web_copy_link