ಹೈದರಾಬಾದ್ನ ಕಾನೂನು ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ 4,042 ಅಕ್ಕಿ ಕಾಳುಗಳನ್ನ ಬಳಸಿ ಬಳಸಿ ಭಗವದ್ಗೀತೆ ಬರೆಯುವ ಮೂಲಕ ಸಾಧನೆ ಮಾಡಿದ್ದಾರೆ. ಮೈಕ್ರೋ ಆರ್ಟ್ ಮೂಲಕ ಸಾಧನೆ ಮಾಡಲು ವಿದ್ಯಾರ್ಥಿನಿ ಸ್ವರಿಕಾ 150 ಗಂಟೆ ಸಮಾಯವಕಾಶ ತೆಗೆದುಕೊಂಡಿದ್ದಾರೆ.
ಅಕ್ಕಿಯ ಮೇಲೆ ಮೈಕ್ರೋ ಆರ್ಟ್ ಮಾಡೋ ಸ್ವರಿಕಾ ಈ ವೇಳೆ ಭೂತಗನ್ನಡಿಯನ್ನೂ ಬಳಕೆ ಮಾಡೋದಿಲ್ವಂತೆ. ಕೇವಲ ಅಕ್ಕಿ ಮಾತ್ರವಲ್ಲದೇ ಹಾಲು, ಕಾಗದ ಹಾಗೂ ಎಳ್ಳುಗಳನ್ನ ಬಳಕೆ ಮಾಡಿ ಕಲಾಕೃತಿ ರಚಿಸಿದ್ದಾರೆ.
ಕೂದಲನ್ನ ಬಳಸಿ ಸಂವಿಧಾನದ ಮುನ್ನುಡಿ ಬರೆದಿದ್ದ ಸ್ವರಿಕಾಳನ್ನ ತೆಲಂಗಾಣ ಗವರ್ನರ್ ತಮಿಳುಸಾಯಿ ಸೌಂದರಾರಾಜನ್ ಸನ್ಮಾನಿಸಿದ್ದರು.
ಸದ್ಯ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಲು ಯತ್ನಿಸುತ್ತಿರುವ ನಾನು ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನನ್ನ ಕಲಾಕೃತಿಗಳನ್ನ ಪ್ರದರ್ಶಿಸುವ ಇರಾದೆ ಹೊಂದಿದ್ದೇನೆ ಅಂತಾರೆ ಕಲಾವಿದೆ ಸ್ವರಿಕಾ.
ಭಾರತದ ಮೊದಲ ಸೂಕ್ಷ್ಮ ಕಲಾವಿದೆ ಎಂಬ ಹೆಸರು ಪಡೆದಿರುವ ಸ್ವರಿಕಾರನ್ನ 2019ರಲ್ಲಿ ದೆಹಲಿ ಸಾಂಸ್ಕೃತಿಕ ಅಕಾಡೆಮಿ ರಾಷ್ಟೀಯ ಪ್ರಶಸ್ತಿ ನೀಡಿ ಗೌರವಿಸಿದೆ. ಅಲ್ಲದೇ 2017ರಲ್ಲಿ ಇಂಟರ್ನ್ಯಾಷನಲ್ ಆರ್ಡರ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿಯನ್ನೂ ಸ್ವರಿಕಾ ಪಡೆದುಕೊಂಡಿದ್ದಾರೆ.