alex Certify ವಕೀಲನಿಂದ ನಟಿ ಕಂಗನಾಗೆ ಅತ್ಯಾಚಾರದ ಬೆದರಿಕೆ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಕೀಲನಿಂದ ನಟಿ ಕಂಗನಾಗೆ ಅತ್ಯಾಚಾರದ ಬೆದರಿಕೆ…?

ನವರಾತ್ರಿ ಹಬ್ಬದ ಸಂಭ್ರಮದಲ್ಲಿರುವ ಬಾಲಿವುಟ್​ ನಟಿ ಕಂಗನಾ ರಣಾವತ್​ ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ಫೋಟೋ ಶೇರ್​ ಮಾಡುವ ಮೂಲಕ ಅಭಿಮಾನಿಗಳಿಗೆ ನವರಾತ್ರಿಯ ಶುಭ ಕೋರಿದ್ದಾರೆ.

ನವರಾತ್ರಿಗೆ ಯಾರ್ಯಾರು ಉಪವಾಸ ಕೈಗೊಂಡಿದ್ದೀರಾ..? ನಾನಂತೂ ಉಪವಾಸ ಮಾಡುತ್ತಿದ್ದೇನೆ. ಅಂದ ಹಾಗೆ ನನ್ನ ವಿರುದ್ಧ ಮತ್ತೊಂದು ಎಫ್​ಐಆರ್​ ದಾಖಲಾಗಿದೆ. ಮಹಾರಾಷ್ಟ್ರದ ಪಪ್ಪು ಸೇನೆಗೆ ನನ್ನ ಮೇಲೆ ವ್ಯಾಮೋಹವಿದ್ದಂತೆ ಕಾಣ್ತಿದೆ. ನನ್ನ ಮಿಸ್​ ಮಾಡ್ಕೋಬೇಡಿ. ಸದ್ಯದಲ್ಲೇ ನಾನು ಬರುತ್ತಿದ್ದೇನೆ ಅಂತಾ ಕ್ಯಾಪ್ಶನ್​ ಹಾಕಿದ್ದಾರೆ.

ಕಂಗನಾರ ಇಂತಹದ್ದೊಂದು ಪೋಸ್ಟ್ ಮಾಡ್ತಿದ್ದಂತೆ ಕಾಮೆಂಟ್​ ಸೆಕ್ಷನ್​ನಲ್ಲಿ ವಾದ – ವಿವಾದಗಳ ಸುರಿಮಳೆಯೇ ಶುರುವಾಗಿದೆ. ಇದರಲ್ಲಿ ಮೆಹೆಂದಿ ರೇಝಾ ಎಂಬ ಹೆಸರಿನಲ್ಲಿ ಫೇಸ್​ಬುಕ್​ ಖಾತೆಯುಳ್ಳ ವ್ಯಕ್ತಿಯೊಬ್ಬ ನಿನ್ನನ್ನ ಮಧ್ಯ ರಸ್ತೆಯಲ್ಲಿ ಅತ್ಯಾಚಾರ ಮಾಡಬೇಕು ಅಂತಾ ಬೆದರಿಕೆ ಒಡ್ಡಿದ್ದಾನೆ. ಈ ಕಮೆಂಟ್​ ಯಾರೋ ರಿಯಾಕ್ಟ್ ಮಾಡಿದ್ದು ನೀನು ವಕೀಲನಾ ಅಂತಾ ಪ್ರಶ್ನೆ ಮಾಡಿದ್ದಾರೆ.

ಕೆಲ ಹೊತ್ತಿನ ಬಳಕೆ ಕ್ಷಮೆ ಕೇಳಿದ ಮೆಹೆಂದಿ ರೇಝಾ, ನನ್ನ ಫೇಸ್​ಬುಕ್​ ಖಾತೆ ಹ್ಯಾಕ್​ ಆಗಿತ್ತು ಎಂದು ಹೇಳಿ ಕ್ಷಮೆ ಕೇಳಿದ್ದಾರೆ. ಈ ರೀತಿ ಕಮೆಂಟ್​ ಹಾಕಿದ ಮೆಹೆಂದಿ ರಾಝಾ ಓಡಿಶಾದ ಝಾರ್ಸ್​ಗುಂಡಾ ಜಿಲ್ಲೆಯ ವಕೀಲ ಅಂತಾ ಹೇಳಲಾಗ್ತಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...