ನವದೆಹಲಿ: ಭಾರತ-ಚೀನಾ ಗಡಿ ಬಿಕ್ಕಟ್ಟಿನ ನಡುವೆಯೇ ಇದೀಗ ಭಾರತದ ಗಡಿಯಲ್ಲಿ ಅಕ್ರಮವಾಗಿ ನುಸುಳುತ್ತಿದ್ದ ಚೀನಾ ಸೈನಿಕನೋರ್ವನನ್ನು ಸೆರೆ ಹಿಡಿಯಲಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ.
ಲಡಾಕ್ ನ ಡೇಮ್ ಚೋಕ್ ಪ್ರದೇಶದ ಬಳಿ ಅಕ್ರಮವಾಗಿ ನುಸುಳುತ್ತಿದ್ದ ಪಿ ಎಲ್ ಎ ಸೇನೆಯ 6ನೇ ಇನ್ ಫಾಂಟ್ರಿ ಡಿವಿಶನ್ ಗೆ ಸೇರಿದ ಚೀನಾದ ಯೋಧನನ್ನು ವಶಕ್ಕೆ ಪಡೆಯಲಾಗಿದ್ದು, ಆತನ ಬಳಿಯಿದ್ದ ಮಿಲಿಟರಿ ಮತ್ತು ನಾಗರಿಕ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸೇನೆ ತಿಳಿಸಿದೆ.
ಚೀನಿ ಸೈನಿಕ ಹೇಳುವ ಪ್ರಕಾರ ತನ್ನ ಹಸುವನ್ನು ಹುಡುಕುತ್ತಾ ಭಾರತದ ಭಾಗಕ್ಕೆ ಬಂದಿದ್ದೆ ಎಂದು ಹೇಳಿದ್ದಾನೆ. ವಿಚಾರಣೆ ಬಳಿಕ ಆತನನ್ನು ಚೀನಾ ಗಡಿ ಭಾಗಕ್ಕೆ ವಾಪಸ್ ಕಳುಹಿಸಲಾಗುವುದು. ದಾಖಲೆಗಳನ್ನು ಹೊರತುಪಡಿಸಿ ಆತನ ಬಳಿ ಯಾವುದೇ ಆಯುಧಗಳು ಇರಲಿಲ್ಲ ಎಂದು ಸೇನಾ ಮೂಲಗಳು ತಿಳಿಸಿವೆ.