alex Certify ಬಡ ಮಕ್ಕಳಿಗೆ ಶಿಕ್ಷಕನಾದ ದೆಹಲಿ ಪೊಲೀಸ್​ ಅಧಿಕಾರಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಡ ಮಕ್ಕಳಿಗೆ ಶಿಕ್ಷಕನಾದ ದೆಹಲಿ ಪೊಲೀಸ್​ ಅಧಿಕಾರಿ..!

ಕರೊನಾ ವೈರಸ್​ನಿಂದಾಗಿ ಜನಸಾಮಾನ್ಯ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ರೆ ಬಡ ಮನೆಯ ಮಕ್ಕಳು ಶಿಕ್ಷಣದಿಂದ ವಂಚಿತರಾಗ್ತಾ ಇದ್ದಾರೆ. ಆನ್​​ಲೈನ್​ ಕ್ಲಾಸ್​​ನಲ್ಲಿ ಖಾಸಗಿ ಶಾಲೆಗಳು ಬ್ಯುಸಿ ಆಗಿದ್ರೆ ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡ್ತಿರೋ ಹಳ್ಳಿಗಾಡಿನ ಮಕ್ಕಳು ಸ್ಮಾರ್ಟ್​ ಫೋನ್​, ಲ್ಯಾಪ್​ಟಾಪ್​ಗಳನ್ನ ಖರೀದಿ ಮಾಡೋಕೆ ಆಗದೇ ಸಂಕಷ್ಟದಲ್ಲಿದ್ದಾರೆ.

ಮಕ್ಕಳ ಈ ಕಷ್ಟವನ್ನ ಅರಿತ ದೆಹಲಿಯ ಪೊಲೀಸ್​​ ಥಾನ್​ ಸಿಂಗ್​​ ಕರೊನಾದಿಂದಾಗಿ ಶಿಕ್ಷಣದಿಂದ ವಂಚಿತರಾಗಿರುವ ಮಕ್ಕಳಿಗೆ ಪಾಠ ಕಲಿಸುತ್ತಿದ್ದಾರೆ. ಕೆಂಪು ಕೋಟೆ ಸಮೀಪದಲ್ಲೇ ಇರುವ ಸಾಯಿ ದೇವಸ್ಥಾನದಲ್ಲಿ ಥಾನ್​ ಸಿಂಗ್​​ ಮಕ್ಕಳಿಗೆ ಶಿಕ್ಷಕರಾಗಿದ್ದಾರೆ,

ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಪೊಲೀಸ್​ ಥಾನ್​ ಸಿಂಗ್​, ನಾನು ಈ ಹಿಂದೆಯೂ ಈ ರೀತಿ ತರಗತಿಗಳನ್ನ ನಡೆಸುತ್ತಿದ್ದೆ. ಕರೊನಾದಿಂದಾಗಿ ಮಕ್ಕಳ ಸಮಸ್ಯೆ ಆಗಬಾರದು ಅಂತಾ ಶಾಲೆಯನ್ನ ಬಂದ್​ ಮಾಡಿದೆ. ಆದರೆ ಇಲ್ಲಿನ ಎಷ್ಟೋ ಮಕ್ಕಳು ಶಿಕ್ಷಣದಿಂದ ವಂಚಿತರಾಗ್ತಾ ಇರದನ್ನ ಕಂಡು ಮತ್ತೆ ನನ್ನ ತರಗತಿಗಳನ್ನ ಶುರು ಮಾಡಿದ್ದೇನೆ ಅಂತಾ ಹೇಳಿದ್ರು.

ತರಗತಿಗೆ ಬರುವ ಮಕ್ಕಳಿಗೆ ಥಾನ್​ ಸಿಂಗ್​ ಸ್ಯಾನಿಟೈಸರ್​ ಹಾಗೂ ಮಾಸ್ಕ್​ಗಳನ್ನ ವಿತರಣೆ ಮಾಡಿದ್ದಾರೆ. ಸಾಮಾಜಿಕ ಅಂತರವನ್ನ ಕಾಪಾಡಿಕೊಂಡು ಮಕ್ಕಳಿಗೆ ಶಿಕ್ಷಣ ನೀಡಲಾಗ್ತಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...