ಕರೊನಾ ವಿಶ್ವದಲ್ಲಿ ಎಷ್ಟರಮಟ್ಟಿಗೆ ಭಯವನ್ನ ಸೃಷ್ಟಿ ಮಾಡಿದ್ಯೋ ಅಷ್ಟೇ ತಮಾಷೆಯ ವಿಚಾರವೂ ಆಗಿ ಹೋಗಿದೆ. ಸಾಮಾಜಿಕ ಜಾಲತಾಣದಲ್ಲಂತೂ ಟ್ರೋಲಿಗರು ಕರೊನಾವನ್ನೇ ತಮಾಷೆಯ ವಿಚಾರವಾಗಿ ಮಾಡಿಕೊಂಡು ನಗೆ ಊಟವನ್ನ ಬಡಿಸ್ತಾ ಇದ್ದಾರೆ.
ಕರೊನಾ ಎಷ್ಟರ ಮಟ್ಟಿಗೆ ಖ್ಯಾತಿ ಪಡೆದಿದೆ ಎಂದರೆ ಅನೇಕ ಪೋಷಕರು ತಮ್ಮ ಮಕ್ಕಳಿಗೆ ಈ ಕಾಯಿಲೆಯ ಹೆಸರಿಡೋಕೆ ಆರಂಭಿಸಿದ್ದಾರೆ. ಆಂಧ್ರ ಪ್ರದೇಶದ ಕಡಪಾ ಜಿಲ್ಲೆಯ ಶಶಿಕಲಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಈ ಕಂದಮ್ಮಗೆ ಕರೊನಾ ಕುಮಾರಿ ಅಂತಾ ನಾಮಕರಣ ಮಾಡಲಾಗಿದೆ. ಇನ್ನು ರಾಮದೇವಿ ಎಂಬವರು ತಮ್ಮ ಗಂಡು ಮಗುವಿಗೆ ಕರೊನಾ ಕುಮಾರ ಅಂತಾ ಹೆಸರಿಟ್ಟಿದ್ದಾರೆ. ಹೆರಿಗೆ ಮಾಡಿಸಿದ ವೈದ್ಯರ ಸಲಹೆ ಮೇರೆಗೆ ತಮ್ಮ ಮಕ್ಕಳಿಗೆ ಈ ಹೆಸರಿಟ್ಟಿದ್ದೇವೆ ಅಂತಾ ಮಕ್ಕಳ ಪೋಷಕರು.
ಚತ್ತೀಸಗಢದಲ್ಲಿ ಇತ್ತೀಚಿಗೆ ಪೋಷಕರೊಬ್ಬರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು ಇವಕ್ಕೆ ಕರೊನಾ ಹಾಗೂ ಕೋವಿಡ್ ಅಂತಾ ನಾಮಕರಣ ಮಾಡಿದ್ದಾರೆ. ರಾಜಸ್ಥಾನದಲ್ಲಿ ಗಂಡು ಮಗುವಿಗೆ ಲಾಕ್ಡೌನ್ ಅಂತಾ ಹೆಸರಿಡಲಾಗಿದೆ.
ಉತ್ತರ ಪ್ರದೇಶದಲ್ಲಿ ಜನಿಸಿದ ಗಂಡು ಮಗುವಿಗೆ ಸ್ಯಾನಿಟೈಸರ್ ಅಂತಾ ನಾಮಕರಣ ಮಾಡಲಾಗಿದೆ . ಮಗುವಿಗೆ ಈ ತರ ಹೆಸರನ್ನೇಕೆ ಇಟ್ಟಿದ್ದೀರಾ ಅಂತಾ ಕೇಳಿದ್ರೆ ಜನರು ನಮ್ಮ ಮಗನ ಹೆಸರನ್ನ ಹೇಳಿದಾಗಲೆಲ್ಲ ಅವರ ತಲೆಯಲ್ಲಿ ಕೈಯನ್ನ ಶುಭ್ರವಾಗಿಟ್ಟುಕೊಳ್ಳಬೇಕೆಂಬ ಯೋಚನೆ ಬರಬೇಕು ಅಂತಾ ಪೋಷಕರು.
ಭಾರತದಲ್ಲಷ್ಟೇ ಅಲ್ಲ ಫಿಲಿಫೈನ್ಸ್ನಲ್ಲೂ ಈ ಟ್ರೆಂಡ್ ಶುರುವಾಗಿದೆ. ಏಪ್ರಿಲ್ನಲ್ಲಿ ಜನಿಸಿದ ಮಗುವಿಗೆ ಪೋಷಕರು ಕೋವಿಡ್ ಮರೆ ಅಂತಾ ಹೆಸರಿಟ್ಟಿದ್ದಾರೆ. ಇನ್ನೊಬ್ಬ ದಂಪತಿ ತಮ್ಮ ಮಗುವಿಗೆ ಕೋವಿಡ್ ಬ್ರ್ಯಾಂಟ್ ಅಂತಾ ನಾಮಕರಣ ಮಾಡಿದ್ದಾರೆ.