ಕೋವಿಡ್-19 ಲಾಕ್‌ಡೌನ್ ಕಾರಣದಿಂದ ಮಾನವ ಚಟುವಟಿಕೆಗಳು ಸ್ಥಗಿತಗೊಂಡಿರುವ ಕಾರಣ ವನ್ಯಜೀವಿಗಳು ಎಲ್ಲೆಡೆ ಸ್ವಚ್ಛಂದವಾಗಿ ವಿಹರಿಸುತ್ತಿರುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಬಾರಿ ನೋಡಿದ್ದೇವೆ.
ಜಗತ್ತಿನ ಅತ್ಯಂತ ಬ್ಯುಸಿಯಾದ ಸಮುದ್ರ ಮಾರ್ಗಗಳಲ್ಲಿ ಒಂದಾಗಿರುವ ಹಾಂಕಾಂಗ್ ಹಾಗೂ ಮಕಾವೂನಲ್ಲಿ ಕಂಡುಬರುವ ಅಪರೂಪದ ಪಿಂಕ್ ಡಾಲ್ಫಿನ್‌ಗಳು, ಅಲ್ಲಿನ ಫೆರ‍್ರಿ ಚಟುವಟಿಕೆಗಳಿಂದ ಅಳಿವಿನ ಅಂಚಿನತ್ತ ಸಾಗುತ್ತಿವೆ ಎಂದು ವಿಜ್ಞಾನಿಗಳು ಕಳಕಳಿ ವ್ಯಕ್ತಪಡಿಸಿದ್ದರು.
ಫೆಬ್ರವರಿಯಿಂದ ಈ ಪ್ರದೇಶದಲ್ಲಿ ನೌಕಾಯಾನ ಸ್ಥಗಿತಗೊಂಡಿರುವ ಕಾರಣ ಹೊಸದಾಗಿ ನೆಲೆಸಿರುವ ಪ್ರಶಾಂತವಾದ ವಾತಾವರಣದಲ್ಲಿ ಈ ಪಿಂಕ್ ಡಾಲ್ಫಿನ್‌ಗಳು ಸ್ವಚ್ಛಂದವಾಗಿ ವಿಹರಿಸುತ್ತಿರುವುದನ್ನು ಕಾಣಬಹುದಾಗಿದೆ.
ಪರ್ಲ್ ನದಿ ಸಮುದ್ರಕ್ಕೆ ಸೇರುವ ಈ ಅಳಿವೆಯ ಜಾಗವು ಜಗತ್ತಿನ ಅತ್ಯಂತ ದಟ್ಟ ಕೈಗಾರಿಕಾ ಪ್ರದೇಶಗಳಲ್ಲಿ ಒಂದಾಗಿದೆ. ಈ ಪ್ರದೇಶದಲ್ಲಿ ಇದ್ದ ಪಿಂಕ್ ಡಾಲ್ಫಿನ್‌ಗಳ ದಟ್ಟಣೆಯು ಕಳೆದ 15 ವರ್ಷಗಳಲ್ಲಿ 70-80 ಪ್ರತಿಶತದಷ್ಟು ಇಳಿಕೆಯಾಗಿದೆ ಎಂದು ತಿಳಿದುಬಂದಿದೆ.