ವಾಷಿಂಗ್ಟನ್: ಸ್ಥಳೀಯರಿಗೆ ಉದ್ಯೋಗ ಅವಕಾಶಗಳನ್ನು ಹೆಚ್ಚಿಸುವ ಉದ್ದೇಶದಿಂದ ವಲಸೆ ರಹಿತ ವೀಸಾ ಅರ್ಜಿದಾರರ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತ ವಲಸೆ ರಹಿತ ವೀಸಾ ಅರ್ಜಿದಾರರಿಗೆ ಪ್ರೀಮಿಯಂ ಪ್ರೊಸೆಸಿಂಗ್ ಶುಲ್ಕವನ್ನು ಏರಿಕೆ ಮಾಡಿದೆ. ಅಮೆರಿಕ ಸಿಟಿಜನ್ ಶಿಪ್ ಅಂಡ್ ಇಮಿಗ್ರೇಷನ್ ಸರ್ವೀಸಸ್ ವತಿಯಿಂದ ಪ್ರೀಮಿಯಂ ಪ್ರೊಸೆಸಿಂಗ್ ಶುಲ್ಕವನ್ನು ಶೇಕಡ 75 ರಷ್ಟು ಹೆಚ್ಚಳ ಮಾಡಲಾಗಿದೆ.
ಹೆಚ್ 2 ಬಿ ಮತ್ತು ಆರ್ 1 ವೀಸಾ ಅರ್ಜಿದಾರರ ಹೊರತಾಗಿ ಉಳಿದವರಿಗೆ 1440 ಡಾಲರ್ ನಿಂದ 2550 ಡಾಲರ್ ವರೆಗೆ ಶುಲ್ಕ ಹೆಚ್ಚಳ ಮಾಡಲಾಗಿದೆ. ವಿದೇಶಿ ಉದ್ಯೋಗದಾತರು ತಮ್ಮ ವೀಸಾ ಅರ್ಜಿಗಳ ಕುರಿತ ನಿರ್ಧಾರಗಳನ್ನು ತ್ವರಿತಗೊಳಿಸಲು ಪಾವತಿಸುವ ಶುಲ್ಕ ಇದಾಗಿದ್ದು, ಅಕ್ಟೋಬರ್ 19 ರಿಂದಲೇ ಹೊಸ ಶುಲ್ಕ ಜಾರಿಗೆ ಬರಲಿದೆ.