alex Certify ಸಾಲ ತೀರಿಸಲು ಸ್ನೇಹಿತನನ್ನೇ ವಂಚಿಸಿದ ಭೂಪ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಲ ತೀರಿಸಲು ಸ್ನೇಹಿತನನ್ನೇ ವಂಚಿಸಿದ ಭೂಪ….!

ಗೆಳೆಯನಿಗೆ ಹಣಕಾಸು ಸಚಿವಾಲಯದಲ್ಲಿ ಕೆಲಸ ಕೊಡಿಸುತ್ತೇನೆಂದು ಯಾಮಾರಿಸಿದ ಖದೀಮನೊಬ್ಬ 1 ಲಕ್ಷದ 54 ಸಾವಿರ ರೂಪಾಯಿ ಪೀಕಿದ ಘಟನೆ ದೆಹಲಿಯಲ್ಲಿ ನಡೆದಿದೆ. ಆರೋಪಿ ಗೌರವ್​ ದತ್ತಾನನ್ನ ದೆಹಲಿ ಪೊಲೀಸರು ಬಂಧಿಸಿದ್ದಾರೆ.

ನಾನು 2015ರಲ್ಲಿ ಕಾಲ್​ ಸೆಂಟರ್​ ಕೆಲಸಕ್ಕೆ ಸೇರಿದಾಗ ನನಗೆ ಗೌರವ್​ ದತ್ ಪರಿಚಯವಾಗಿತ್ತು. ಬಳಿಕ ಅಲ್ಲಿಂದ ಕೆಲಸ ಬಿಟ್ಟಿದ್ದ ನನಗೆ 2019ರಲ್ಲಿ ಗೌರವ್​ ಸಂಪರ್ಕಕ್ಕೆ ಸಿಕ್ಕಿದ್ದ. ನಾನು ಹಣಕಾಸು ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ನನ್ನನ್ನ ನಂಬಿಸಿದ್ದ. ಅಲ್ಲದೇ ನನಗೂ ಕೆಲಸ ಕೊಡಿಸುತ್ತೇನೆ ಎಂದು ಸುಳ್ಳು ಹೇಳಿ ಕಂತಿನ ರೂಪದಲ್ಲಿ 1 ಲಕ್ಷದ 54 ಸಾವಿರ ರೂಪಾಯಿ ತೆಗೆದುಕೊಂಡಿದ್ದಾನೆ ಅಂತಾ ದೆಹಲಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಪೂರ್ವ ದೆಹಲಿ ಡಿಸಿಪಿ ಜ್ಞಾನೇಶ್, ಇನ್ನು ಕೆಲ ದಾಖಲೆಗಳು ರೆಡಿಯಾಗಬೇಕು ಎಂದು ಸುಳ್ಳು ಹೇಳಿದ್ದ ಗೌರವ್​ ಮತ್ತಷ್ಟು ಹಣ ಬಾಚೋಕೆ ಪ್ರಯತ್ನ ಪಟ್ಟಿದ್ದಾನೆ, ಈತ ಮೋಸ ಮಾಡ್ತಿದ್ದಾನೆ ಎಂಬುದು ಈತನ ಗೆಳೆಯನ ತಂದೆಯ ಗಮನಕ್ಕೆ ಬರ್ತಿದ್ದಂತೆ ದೆಹಲಿಯ ಜೈತ್​ಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಅಂತಾ ಮಾಹಿತಿ ನೀಡಿದ್ರು.

ವಿಚಾರಣೆ ವೇಳೆ ಸತ್ಯ ಬಾಯ್ಬಿಟ್ಟಿರೋ ಗೌರವ್​, ನಾನು 1 ಲಕ್ಷದ 50 ಸಾವಿರ ರೂಪಾಯಿ ಸಾಲ ಮಾಡಿದ್ದೆ. ನನ್ನ ಬಳಿ ಅದನ್ನ ತೀರಿಸೋಕೆ ಹಣವಿಲ್ಲದ ಕಾರಣ ಇಂತಹ ಕೆಲಸ ಮಾಡಿದೆ ಅಂತಾ ತಪ್ಪೊಪ್ಪಿಕೊಂಡಿದ್ದಾನೆ. ಸದ್ಯ ಆರೋಪಿಯನ್ನ ಪೊಲೀಸ್​ ಕಸ್ಟಡಿಯಲ್ಲಿ ಇರಿಸಲಾಗಿದ್ದು ನಕಲಿ ದಾಖಲೆಗಳನ್ನ ವಶಕ್ಕೆ ಪಡೆಯಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...