ಜೈಪುರದ 18 ವರ್ಷದ ಯುವಕ ಶೋಯೆಬ್ ಅಫ್ತಬ್ 720 ಕ್ಕೆ 720 ಅಂಕ ಪಡೆಯುವ ಮೂಲಕ ರಾಷ್ಟ್ರಕ್ಕೆ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ,
ವೈದ್ಯಕೀಯ ಅರ್ಹತಾ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದರ ಬಗ್ಗೆ ಖುದ್ದು ಶೋಯೆಬ್ ಅಫ್ತಬ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಲಾಕ್ಡೌನ್ ಸಮಯದಿಂದಲೇ ನಾನು ಕಠಿಣ ಅಭ್ಯಾಸದಲ್ಲಿ ತೊಡಗಿದ್ದೆ. 2018ರಿಂದ ನಾನು ನನ್ನ ಹುಟ್ಟೂರಿಗೆ ಹೋಗಿಲ್ಲ. ದಿನಕ್ಕೆ 10ರಿಂದ 12 ಗಂಟೆ ಓದಿನಲ್ಲೇ ನಿರತನಾಗಿರುತ್ತಿದ್ದೆ. ನನ್ನ ತಂಗಿ ಹಾಗೂ ತಾಯಿಯ ಜೊತೆ ಕೋಟಾದಲ್ಲಿ ನೆಲೆಸಿದ್ದ ನಾನು ಓದಿಗಾಗಿ ನನ್ನೆಲ್ಲ ಸಮಯವನ್ನ ಮೀಸಿಲಿಟ್ಟಿದ್ದೆ ಅಂತಾ ಅನುಭವ ಹಂಚಿಕೊಂಡ್ರು.
ರಾಷ್ಟ್ರಕ್ಕೆ ಮೊದಲ ಅಂಕ ಪಡೆದು ಸಾಧನೆ ಮಾಡೋದ್ರ ಜೊತೆಯಲ್ಲಿ ಅಫ್ತಬ್ ನೀಟ್ ಪರೀಕ್ಷೆಯಲ್ಲಿ ಔಟ್ ಆಫ್ ಔಟ್ ಪಡೆದ ಮೊದಲ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಸದ್ಯ ಅಫ್ತಬ್ ದೆಹಲಿಯ ಏಮ್ಸ್ ಅಥವಾ ಮೆಡಿಕಲ್ ಸೈನ್ಸ್ ವಿಶ್ವವಿದ್ಯಾಲಯದಲ್ಲಿ ಕಾರ್ಡಿಯಾಲೋಜಿಸ್ಟ್ ವಿಭಾಗದಲ್ಲಿ ವ್ಯಾಸಂಗ ಮಾಡುವ ಇರಾದೆ ಹೊಂದಿದ್ದಾರೆ.