alex Certify ಕೊನೆಗೂ ದಂಡ ಸಹಿತ ತೆರಿಗೆ ಪಾವತಿಸಿದ ತಲೈವಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊನೆಗೂ ದಂಡ ಸಹಿತ ತೆರಿಗೆ ಪಾವತಿಸಿದ ತಲೈವಾ..!

ತೆರಿಗೆ ಪಾವತಿ ವಿಚಾರದಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದ ಸೂಪರ್​ಸ್ಟಾರ್​ ರಜನಿಕಾಂತ್​ ಕೊನೆಗೂ ತಮ್ಮ ಒಡೆತನದ ಮದುವೆ ಹಾಲ್​ಗೆ ದಂಡ ಸಹಿತ ತೆರಿಗೆಯನ್ನ ಪಾವತಿಸಿದ್ದಾರೆ .

ಚೆನ್ನೈನಲ್ಲಿ ರಜನಿಕಾಂತ್ ಒಡೆತನದ ರಾಘವೇಂದ್ರ ಮಂಟಪಕ್ಕೆ ಆಸ್ತಿ ತೆರಿಗೆ ಪಾವತಿ ವಿಳಂಬ ಹಿನ್ನೆಲೆ ಗ್ರೇಟರ್​ ಚೆನ್ನೈ ಕಾರ್ಪೋರೇಷನ್​ ನೋಟಿಸ್​ ನೀಡಿತ್ತು. ಆದರೆ ಆಸ್ತಿ ತೆರಿಗೆ ಪಾವತಿಗೆ ನಿರಾಕರಿಸಿದ್ದ ರಜನಿಕಾಂತ್ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ಆದರೆ ಹೈಕೋರ್ಟ್​ನಲ್ಲಿ ರಜನಿಕಾಂತ್​ಗೆ ಹಿನ್ನೆಡೆಯಾದ ಹಿನ್ನೆಲೆ ಇದೀಗ ದಂಡ ಸಮೇತ 6,39,846 ರೂಪಾಯಿಯನ್ನ ಪಾವತಿ ಮಾಡಿದ್ದಾರೆ. ಇದರಲ್ಲಿ 9,386 ರೂಪಾಯಿ ತೆರಿಗೆ ಪಾವತಿ ವಿಳಂಬ ಮಾಡಿದ್ದಕ್ಕೆ ವಿಧಿಸಿದ ದಂಡದ ಮೊತ್ತವೂ ಸೇರಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...