ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಪೇಮೆಂಟ್ಗಳೇ ಹೆಚ್ಚಾಗಿವೆ. ಡಿಜಿಟಲ್ ಭಾರತ ಹಾಗೂ ಕ್ಯಾಶ್ ಲೆಸ್ ಇಂಡಿಯಾ ಮಾಡುವ ನಿಟ್ಟಿನಲ್ಲಿ ಎಲ್ಲಾ ಕಡೆಗಳಲ್ಲಿ ಆನ್ಲೈನ್ ಪೇಮೆಂಟ್ಗೆ ಹೆಚ್ಚಿನ ಹೊತ್ತು ನೀಡಲಾಗುತ್ತಿದೆ.
ಬಹುತೇಕ ಜನರ ಬಳಿ ಫೋನ್ ಪೇ, ಗೂಗಲ್ ಪೇ, ಪೇಟಿಎಂ ಹೀಗೆ ನಾನಾ ಬಗೆಯ ಆನ್ಲೈನ್ ಆಪ್ಗಳಿವೆ. ಒಮ್ಮೊಮ್ಮೆ ಈ ಆಪ್ಗಳಿಂದ ಪೇಮೆಂಟ್ ಮಾಡುವಾಗ ಟೆಕ್ನಿಕಲ್ ಎರರ್ನಿಂದ ಹಣ ಸಂದಾಯವಾಗುವುದಿಲ್ಲ. ನಿಮ್ಮ ಖಾತೆಯಿಂದ ಹಣ ಕಟ್ ಆಗಿರುತ್ತದೆ. ಆದರೆ ನೀವು ಹಣ ಕೊಡಬೇಕಾದವರಿಗೆ ಸಂದಾಯವಾಗಿರುವುದಿಲ್ಲ.
ಈ ಪರಿಸ್ಥಿತಿಯನ್ನು ಎಲ್ಲರೂ ಅನುಭವಿಸಿರುತ್ತಾರೆ. ಪೇಟಿಎಂ ಬಳಕೆದಾರರಿಗೂ ಒಮ್ಮೊಮ್ಮೆ ಇದು ಅನುಭವವಾಗಿರುತ್ತದೆ. ಹಣ ಕಡಿತಗೊಂಡಿದ್ದಲ್ಲಿ ಚಿಂತೆ ಬೇಡ. ನಿಮ್ಮ ಖಾತೆಯಲ್ಲಿ ಹಣ ಕಡಿತವಾದಾಗ ಸುಲಭ ರೀತಿಯಲ್ಲಿ ಆ ಹಣವನ್ನು ವಾಪಸ್ ಪಡೆಯಬಹುದು. ಈ ಬಗ್ಗೆ ದೂರು ನೀಡಿದ್ದಲ್ಲಿ ನಿಮ್ಮ ಹಣ ವಾಪಸ್ ಆಗುತ್ತದೆ. ದೂರು ನೀಡುವುದು ಹೇಗೆ ಅಂತೀರಾ ಮುಂದೆ ಓದಿ.
ಪೇಟಿಎಂ ಅಪ್ಲಿಕೇಷನ್ನಲ್ಲಿ ಹೋಗಿ. ನಂತರ ಮೇಲ್ಭಾಗದಲ್ಲಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ ಆಗ 24*7ಸಹಾಯ ಮತ್ತು ಬೆಂಬಲ ಎಂದು ಬರುತ್ತದೆ. ಇದರಲ್ಲಿ ನಾಲ್ಕೈದು ಆಪ್ಷನ್ ನಿಮಗೆ ಕಾಣುತ್ತದೆ. ಅಂದರೆ ನಿಮ್ಮ ಹಣ ಕಡಿತಗೊಂಡಿದ್ದು ಶಾಪಿಂಗ್ ಸಮಯದಲ್ಲೋ, ರೀಚಾರ್ಜ್ ಸಮಯದಲ್ಲೋ ಸೇರಿದಂತೆ ಒಂದಿಷ್ಟು ಆಪ್ಷನ್ಗಳನ್ನು ಕೇಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ದೂರು ಸಲ್ಲಿಸಬಹುದು. ಇನ್ನು ಮತ್ತೊಂದು ಸುಲಭ ಮಾರ್ಗ ಎಂದರೆ ಗ್ರಾಹಕ ಸಂಖ್ಯೆ 0120-4456455 ಗೆ ಕರೆ ಮಾಡಿ ವಿವರಗಳನ್ನು ಹೇಳುವ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬಹುದು.