ಭಾರತೀಯ ಸೇನೆಯನ್ನ ವಿಶ್ವದ ಅತ್ಯಂತ ಗೌರವಾನ್ವಿತ ಸೇನೆಗಳ ಸಾಲಿನಲ್ಲಿ ಇಟ್ಟು ನೋಡಲಾಗುತ್ತೆ. ಭಾರತೀಯ ಸೇನೆಯ ತತ್ವಗಳು ಇಡೀ ವಿಶ್ವಕ್ಕೆ ಮಾದರಿ ಎಂಬಂತಿದೆ. ಸೈನಿಕ ಯಾವತ್ತಿದ್ದರೂ ಸೈನಿಕನೇ, ಆತ ಯಾವ ದೇಶದವನು ಅನ್ನೋದು ನಂತರ ನೋಡಬೇಕು ಅನ್ನೋದು ಭಾರತೀಯ ಸೇನೆಯ ತತ್ವ. ಹೀಗಾಗಿ ಜಮ್ಮು ಕಾಶ್ಮೀರದ ನೌಗಾಮ್ ಸೆಕ್ಟರ್ ನಲ್ಲಿ ಹಾನಿಗೊಳಗಾದ ಪಾಕ್ ಯೋಧನ ಸಮಾಧಿಯನ್ನ ಪುನರ್ ನಿರ್ಮಾಣ ಮಾಡೋಕೆ ಹೊರಟಿದೆ ಭಾರತೀಯ ಸೇನೆ .
ಪಾಕಿಸ್ತಾನದ ಯೋಧ ಮೇಜರ್ ಮೊಹ್ದ್ ಶಬೀರ್ ಖಾನ್ 1972ರಲ್ಲಿ ಸಾವನ್ನಪ್ಪಿದ್ದರು. ಆದರೆ ಪಾಕಿಸ್ತಾನದ ಯೋಧನ ಸಮಾಧಿ ಹಾನಿಗೊಳಗಾಗಿದ್ದು ಇದನ್ನ ಸರಿ ಮಾಡೋಕೆ ಭಾರತೀಯ ಸೇನೆ ಮುಂದಾಗಿದೆ.
ಟ್ವಿಟರ್ನಲ್ಲಿ ಪಾಕ್ನ ಹುತಾತ್ಮ ಯೋಧನ ಸಮಾಧಿ ಫೋಟೋ ಶೇರ್ ಮಾಡಿರುವ ಚಿನಾರ್ ಕಾರ್ಪ್ಸ್, ಭಾರತೀಯ ಸೇನೆಯ ಸಂಪ್ರದಾಯಗಳನ್ನ ಗಮನದಲ್ಲಿಟ್ಟುಕೊಂಡು ನಾವು ಅವರ ಸಮಾಧಿ ಸರಿಮಾಡಲಿದ್ದೇವೆ. ಯೋಧ ಯಾವ ದೇಶದವನು ಅನ್ನೋದು ಮುಖ್ಯವಲ್ಲ. ಹುತಾತ್ಮರಾದ ಯೋಧ ಯಾವುದೇ ದೇಶದವರಾಗಿದ್ರೂ ಸಹ ಅವರು ಗೌರವವನ್ನ ಪಡೆಯೋಕೆ ಅರ್ಹರು ಅಂತಾ ಬರೆದುಕೊಂಡಿದೆ.