ಕೇಂದ್ರ ಸರ್ಕಾರ ಖಾಸಗಿ ಕೆಲಸಗಾರರಿಗೂ ಸಾಮಾಜಿಕ ಭದ್ರತೆ ನೀಡುವ ನಿರ್ಧಾರ ಮಾಡಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದಾಗಿ ಖಾಸಗಿ ವಲಯದಲ್ಲಿ ಕೆಲಸ ಮಾಡುವವರಿಗೆ ಸಂಬಳ ಪ್ರಕ್ರಿಯೆಯಲ್ಲಿ ಕೆಲ ಬದಲಾವಣೆ ಆಗಲಿದೆ. ಹಾಗೂ ಈ ಯೋಜನೆ ಭಾರತದಲ್ಲಿ ಇದೇ ಮೊದಲ ಬಾರಿಗೆ ಜಾರಿಗೆ ಬರಲಿದೆ.
ಈ ಯೋಜನೆ ಅನ್ವಯ ಖಾಸಗಿ ವಲಯದ ಕೆಲಸಗಾರರೂ ಸಹ ಮಿನಿಮಮ್ ಸ್ಯಾಲರಿ ಜೊತೆ ಜೊತೆಯಲ್ಲಿ ಸಾಮಾಜಿಕ ಭದ್ರತೆಯನ್ನ ಪಡೆಯಲಿದ್ದಾರೆ ಅಂತಾ ಕೇಂದ್ರ ಕಾರ್ಮಿಕ ಸಚಿವಾಲಯ ಮಾಹಿತಿ ನೀಡಿದೆ.
ಈ ಯೋಜನೆ ಆರಂಭಕ್ಕೂ ಮುನ್ನ ಸರ್ವೇ ಮೂಲಕ ಖಾಸಗಿ ವಲಯದ ನೌಕರರನ್ನ ಗಣನೆಗೆ ತೆಗೆದುಕೊಳ್ಳಲು ಕೇಂದ್ರ ಕಾರ್ಮಿಕ ಸಚಿವಾಲಯ ನಿರ್ಧರಿಸಿದೆ. ಇದಕ್ಕಾಗೇ ಅರ್ಥ ಶಾಸ್ತ್ರಜ್ಞರಾದ ಎಸ್ಪಿ ಮುಖರ್ಜಿ ಹಾಗೂ ಅಮಿತಾಬ್ ಕುಂದು ನೇತೃತ್ವದ ಕಮಿಟಿ ರಚನೆ ಮಾಡಲಾಗಿದೆ. ಅಕ್ಟೋಬರ್ 21ರಂದು ಈ ಕಮಿಟಿ ಸಭೆ ನಡೆಸಲಿದ್ದು ಈ ಸಭೆಯಲ್ಲಿ ಯಾವ ಶ್ರೇಣಿಯ ಕೆಲಸಗಾರರನ್ನ ಈ ಯೋಜನೆಗೆ ಸೇರಿಸಿಕೊಳ್ಳಬೇಕು ಅಂತಾ ನಿರ್ಣಯ ಕೈಗೊಳ್ಳಲಾಗುತ್ತೆ.