ಕುಂಬಳಕಾಯಿ ದೊಡ್ಡ ಸೈಜ್ ಅಲ್ಲೇ ಇರುತ್ತೆ ಅನ್ನೋದು ಎಲ್ಲರಿಗೂ ಗೊತ್ತು. ಹಾಗಾದ್ರೆ ದೊಡ್ಡದು ಅಂದ್ರೆ ಎಷ್ಟು..? ಅಬ್ಬಬ್ಬಾ ಅಂದ್ರೆ 1 ಟನ್ ತೂಗಬಹುದೇನೋ ಅಂತಾ ನೀವು ಹೇಳಬಹುದು. ಆದರೆ ಯುಎಸ್ನ ಮಿನ್ನೆಸೋಟಾದಲ್ಲಿ ಬೆಳೆದ ಕುಂಬಳಕಾಯಿ ತೂಕ ಕೇಳಿದ್ರೆ ನೀವು ಬೆಚ್ಚಿಬೀಳೋದು ಪಕ್ಕಾ.
ಉತ್ತರ ಕ್ಯಾಲಿಫೋರ್ನಿಯಾದಲ್ಲಿ ನಡೆದ ಕುಂಬಳಕಾಯಿ ತೂಕದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಈ ಕುಂಬಳಕಾಯಿ ತೂಕ ಬರೋಬ್ಬರಿ 1065 ಕೆಜಿ..! ಟ್ರ್ಯಾವಿನ್ ಜೀಂಜರ್ ಎಂಬವರ ತೋಟದಲ್ಲಿ ಬೆಳೆದ ಈ ಕುಂಬಳಕಾಯಿ 16,450 ಡಾಲರ್ ಹಣವನ್ನ ಸಂಪಾದಿಸಿದೆ. ಅಲ್ಲದೇ ಈ ಕುಂಬಳಕಾಯಿ ಉತ್ತರ ಅಮೆರಿಕದ ಅತ್ಯಂತ ಭಾರವಾದ ಕುಂಬಳಕಾಯಿ ಅಂತಾ ದಾಖಲೆ ಬರೆದಿದೆ.
ಈ ಕುಂಬಳಕಾಯಿಯನ್ನ ಬೆಳೆದ ಟ್ರ್ಯಾವಿನ್ ಜೀಂಜರ್ ಎಂಬಾತ ಈ ದೈತ್ಯ ಕುಂಬಳಕಾಯಿಗೆ ಟೈಗರ್ ಕಿಂಗ್ ಅಂತಾ ನಾಮಕರಣ ಮಾಡಿದ್ದಾರೆ. ನಾನು ಈ ಕುಂಬಳಕಾಯಿಗೆ ಈ ಹೆಸರನ್ನ ಇಡೋ ವೇಳೆ ಇದಿನ್ನೂ ಪುಟಾಣಿ ಸೈಜ್ನಲ್ಲಿತ್ತು ಅಂತಾ ಹೇಳಿದ್ದಾರೆ.