ಮದುವೆ ಸ್ವರ್ಗದಲ್ಲಿ ನಿಶ್ಚಯವಾಗುತ್ತೆ ಅಂತಾ ಹೇಳ್ತಾರೆ. ಪ್ರೀತಿಯನ್ನ ಸಂಭ್ರಮಿಸೋರು ಮಾತ್ರ ವೈವಾಹಿಕ ಜೀವನಕ್ಕೆ ಅಣಿಯಾಗೋಕೆ ಸಾಧ್ಯ. ಇದೇ ರೀತಿ ಮದುವೆ ಸಮಾರಂಭವೊಂದರಲ್ಲಿ ನಡೆದ ಘಟನೆಯೊಂದು ನೆಟ್ಟಿಗರ ಮನ ಕದ್ದಿದೆ.
ಕ್ರಿಶ್ಚಿಯನ್ ಸಂಪ್ರದಾಯದಲ್ಲಿ ವಧು ತನ್ನ ಕೈಲಿರೋ ಹೂ ಗುಚ್ಚವನ್ನ ಹಾರಿಸೋ ಪದ್ಧತಿ ಇದೆ. ಆದರೆ ಇಲ್ಲಿ ವಧು ತನ್ನ ಬ್ರೈಡ್ ಮೇಡ್ಗೆ ಹೂ ಗುಚ್ಚವನ್ನ ಹಸ್ತಾಂತರಿಸುತ್ತಾಳೆ. ನಂತರ ನಡೆದ ಘಟನೆಯಂತೂ ಕನಸು ನನಸಾದ ರೀತಿ ಇದೆ.
ಹೂಗುಚ್ಚ ಪಡೆದುಕೊಂಡ ಬ್ರೈಡ್ಮೇಡ್ ಮುಂದೆ ತನಗೊಂದು ಅಚ್ಚರಿ ಕಾದಿದೆ ಎಂಬ ಊಹೆಯೂ ಇರಲಿಲ್ಲ. ನೂತನ ವಧು ಬ್ರೈಡ್ ಮೇಡ್ಗೆ ತಿರುಗುವಂತೆ ಹೇಳಿದ್ದಾರೆ. ಆ ಮಾತಿಗೆ ಅವಳು ತಿರುಗಿ ನೋಡ್ತಿದ್ದಂತೆ ಗ್ರೂಮ್ಸ್ ಮೇಡ್ ಒಬ್ಬ ಉಂಗುರವನ್ನ ಹಿಡಿದು ಪ್ರಪೋಸ್ ಮಾಡಿದ್ದಾನೆ. ಈ ಸುಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ.