ಬಿಹಾರದಲ್ಲಿ ವಿಧಾನಸಭಾ ಚುನಾವಣಾ ಕಣ ರಂಗೇರಿದೆ. ನವೆಂಬರ್ 3ರಂದು ನಡೆಯಲಿರುವ ಚುನಾವಣೆಗೆ ರಾಜಕೀಯ ಪಕ್ಷಗಳು ಇನ್ನಿಲ್ಲದ ಕಸರತ್ತು ನಡೆಸಿವೆ. ಈ ನಡುವೆ ಥೇಟ್ ಪ್ರಧಾನಿ ಮೋದಿಯಂತೆ ಕಾಣುವ ವ್ಯಕ್ತಿಯೊಬ್ಬರು ಚುನಾವಣಾ ಕಣಕ್ಕೆ ಇಳಿದು ಆಶ್ಚರ್ಯ ಮೂಡಿಸಿದ್ದಾರೆ.
ಗೋಪಾಲಗಂಜ್ ಜಿಲ್ಲೆಯ ಹಥುವಾ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿರೋ ಪಾಠಕ್ ವಂಚಿತ್ ಸಮಾಜ್ ಪಕ್ಷದ ಸದಸ್ಯ. ಇವರ ಮುಖ ಚಹರೆ ಪ್ರಧಾನಿ ಮೋದಿ ರೀತಿಯೇ ಇದ್ದು ಇವರನ್ನ ನೋಡಿದ ಅನೇಕರು ಗೊಂದಲಕ್ಕೀಡಾಗಿದ್ದಾರೆ.
ಮೂಲತಃ ಉತ್ತರ ಪ್ರದೇಶ ಜಿಲ್ಲೆಯ ಸಹರನ್ಪುರ ಜಿಲ್ಲೆಯವರಾದ ಪಾಠಕ್ ಪ್ರಸ್ತುತ ಗೋಪಾಲಗಂಜ್ನ ಸವನಹ ಹಳ್ಳಿಯಲ್ಲಿ ವಾಸವಾಗಿದ್ದಾರೆ.
ಪ್ರಧಾನಿ ಮೋದಿಯವರ ನಡೆಯನ್ನೇ ಅನುಕರಿಸ್ತಿರಲ್ಲಾ ಅಂತಾ ಪಾಠಕ್ರನ್ನ ಪ್ರಶ್ನೆ ಮಾಡಿದ್ರೆ, ಇದೊಂದು ಕಾಕತಾಳೀಯ ಅಷ್ಟೇ. ಮೋದಿ ಉತ್ತಮ ಸ್ಥಾನದಲ್ಲಿದ್ದಾರೆ ಅನ್ನೋದನ್ನ ಬಿಟ್ಟರೆ ತಾವು ಪ್ರಜೆಗಳಿಗೆ ಕೊಟ್ಟ ಮಾತನ್ನ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ನಾನು ಚುನಾವಣೆಗೆ ಬರುವ ನಿರ್ಧಾರ ಮಾಡಿದ್ದು ಬಡವರಿಗಾಗಿ ಶ್ರಮಿಸುವೆ ಅಂತಾ ಹೇಳಿದ್ರು.