alex Certify ಪುಟ್ಟ ಮಗನ ಖುಷಿಗಾಗಿ ಆ ತಂದೆ ಮಾಡಿದ್ದಾರೆ ಈ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟ್ಟ ಮಗನ ಖುಷಿಗಾಗಿ ಆ ತಂದೆ ಮಾಡಿದ್ದಾರೆ ಈ ಕೆಲಸ

ಅಪ್ಪ ಅಂದರೆ ಆಕಾಶ ಅಂತಾರೆ. ತನ್ನ ಹೆಂಡತಿ, ಮಕ್ಕಳು ಸದಾ ಸಂತೋಷವಾಗಿರಬೇಕು ಅಂತಾ ಆತ ಜೀವಮಾನ ಪೂರ್ತಿ ದುಡೀತಾನೆ. ಮಕ್ಕಳ ಆಸೆ ಈಡೇರಿಸೋಕೆ ಆತ ಎಂತಹ ತ್ಯಾಗಕ್ಕೂ ಸಿದ್ಧನಿರ್ತಾನೆ. ತಮಿಳುನಾಡು ತಂದೆಯೊಬ್ಬ ಇದೀಗ ಇಂತಹದ್ದೇ ಒಂದು ಕೆಲಸ ಮಾಡಿ ನೆಟ್ಟಿಗರ ಮನ ಗೆದ್ದಿದ್ದಾನೆ.

ಮಧುರೈಮ ಸೂರ್ಯಮೂರ್ತಿ ಎಂಬಾತ ತನ್ನ ಏಳು ವರ್ಷದ ಮಗನಿಗಾಗಿ ಮರದ ಸೈಕಲ್​ ಒಂದನ್ನ ರೆಡಿ ಮಾಡಿಕೊಟ್ಟಿದ್ದು ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಿದೆ. ಇನ್ನು ಈ ಬಗ್ಗೆ ತನ್ನ ಅನುಭವ ಹಂಚಿಕೊಳ್ಳೋ ಸೂರ್ಯಮೂರ್ತಿ ಈ ಸೈಕಲ್​ ಮಾಡೋಕೆ ನನಗೆ 8 ದಿನ ಬೇಕಾಯ್ತು. ಟೈರ್, ರಿಮ್​, ಬ್ರೇಕ್ಸ್ ಹಾಗೂ ಚೈನ್​ ಹೊರತುಪಡಿಸಿ ಮಿಕ್ಕೆಲ್ಲ ಭಾಗಗಳನ್ನ ಮರದಿಂದಲೇ ತಯಾರಿಸಿದ್ದೇನೆ ಅಂತಾ ಹೇಳಿದ್ರು.

ತಾಯಿ ಪ್ರೀತಿ ಬಗ್ಗೆ ಎಲ್ಲರೂ ಮಾತನಾಡ್ತಾರೆ. ಆದರೆ ತಂದೆ ಪ್ರೀತಿಯನ್ನ ಹಾಡಿ ಹೊಗಳುವವರ ಸಂಖ್ಯೆ ಕಡಿಮೆ. ಇದೀಗ ಸೂರ್ಯ ಮೂರ್ತಿ ಸೈಕಲ್​ ತಯಾರು ಮಾಡ್ತಿರೋ ವಿಡಿಯೋ ವೈರಲ್​ ಆಗ್ತಿದ್ದಂತೆ ಅನೇಕರು ತಂದೆ ಪ್ರೀತಿಯನ್ನ ಕಾಮೆಂಟ್​ ಮೂಲಕ ಕೊಂಡಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...