ಕ್ರಿಕೆಟರ್ ದಿನೇಶ್ ಕಾರ್ತಿಕ್ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ದಿನೇಶ್ ಕಾರ್ತಿಕ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದಾರೆ.
ತಂಡದ ನಿರ್ವಾಹಕರಿಗೆ ದಿನೇಶ್ ಕಾರ್ತಿಕ್ ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕತ್ವ ಜವಾಬ್ದಾರಿಯನ್ನು ಇಂಗ್ಲೆಂಡ್ ನ ಇಯಾನ್ ಮಾರ್ಗನ್ ಗೆ ಹಸ್ತಾಂತರಿಸಿದ್ದಾರೆ.
ಇಂದು ಅಬುಧಾಬಿಯಲ್ಲಿ ನಡೆಯುವ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಮಾರ್ಗನ್ ತಂಡವನ್ನು ಮುನ್ನಡೆಸಲಿದ್ದಾರೆ. ಮಾರ್ಗನ್,ಈವರೆಗೆ ಇಂಗ್ಲೆಂಡ್ ತಂಡದ ಉಪನಾಯಕತ್ವವನ್ನು ನಿಭಾಯಿಸಿದ್ದರು. ತಂಡದ ಕಳಪೆ ಆಟದ ಬಗ್ಗೆ ದಿನೇಶ್ ಕಾರ್ತಿಕ್ ನಾಯಕತ್ವವನ್ನು ಪ್ರಶ್ನೆ ಮಾಡಲಾಗಿತ್ತು. ಇದಾದ ನಂತ್ರ ದಿನೇಶ್ ಕಾರ್ತಿಕ್ ತಮ್ಮ ನಾಯಕತ್ವ ಹಸ್ತಾಂತರಿಸಲು ನಿರ್ಧರಿಸಿದ್ರು.
ದಿನೇಶ್ ಕಾರ್ತಿಕ್ ರಂತಹ ನಾಯಕರು ಸಿಕ್ಕಿರುವುದು ನಮ್ಮ ಅದೃಷ್ಟ. ತಂಡಕ್ಕೆ ಅವರು ಮೊದಲ ಸ್ಥಾನ ನೀಡಿದ್ದಾರೆ. ಅವರ ನಿರ್ಧಾರ ಅಚ್ಚರಿಗೆ ಕಾರಣವಾಗಿದೆ. 2019ರ ವಿಶ್ವಕಪ್ ವಿಜೇತ ತಂಡದ ಆಟಗಾರ ಮಾರ್ಗನ್ ನಾಯಕರಾಗಿರುವುದು ನಮ್ಮ ಅದೃಷ್ಟವೆಂದು ಕೆಕೆಆರ್ ಸಿಇಒ ವೆಂಕಿ ಮೈಸೂರ್ ಹೇಳಿದ್ದಾರೆ.
ಪ್ರಸ್ತುತ ಐಪಿಎಲ್ ಅಂಕಪಟ್ಟಿಯಲ್ಲಿ ಕೆಕೆಆರ್ ನಾಲ್ಕನೇ ಸ್ಥಾನದಲ್ಲಿದೆ. ಇದುವರೆಗೆ 7 ಪಂದ್ಯಗಳನ್ನು ಆಡಿರುವ ಕೆಕೆಆರ್ 4 ಪಂದ್ಯಗಳನ್ನು ಗೆದ್ದಿದೆ. 35 ವರ್ಷದ ಕಾರ್ತಿಕ್ ಈ ಋತುವಿನಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ.