ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಆಹಾರ ಮತ್ತು ಕೃಷಿ ಸಂಸ್ಥೆ (ಎಫ್ಎಒ) 75 ನೇ ವರ್ಷಾಚರಣೆಯ ನೆನಪಿಗಾಗಿ ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡಿದ್ದಾರೆ. 75 ರೂಪಾಯಿ ಮೌಲ್ಯದ ನಾಣ್ಯವನ್ನು ಪಿಎಂ ಬಿಡುಗಡೆ ಮಾಡಿದ್ದಾರೆ. ಭಾರತ ಮತ್ತು ಯುಎನ್ ಏಜೆನ್ಸಿ ನಡುವಿನ ದೀರ್ಘಕಾಲದ ಸಂಬಂಧಗಳಿಗೆ ಈ ನಾಣ್ಯವು ಸಾಕ್ಷಿಯಾಗಲಿದೆ.
ಸ್ಮರಣಾರ್ಥ ನಾಣ್ಯಗಳನ್ನು ಸಾಮಾನ್ಯ ಚಲಾವಣೆಗೆ ನೀಡಲಾಗುವುದಿಲ್ಲ. ನಾಗರಿಕರು ಬಯಸಿದರೆ ನಾಣ್ಯವನ್ನು ಪಡೆಯಬಹುದು. ಭಾರತದಲ್ಲಿ ಸ್ಮರಣಾರ್ಥ ನಾಣ್ಯಗಳನ್ನು ಸಾಮಾನ್ಯವಾಗಿ ಕೆಲವು ವಿಶೇಷ ಸಂದರ್ಭಗಳ ಆಚರಣೆಗೆ ಅಥವಾ ವಿಶೇಷ ವ್ಯಕ್ತಿಗಳ ಗೌರವಾರ್ಥ ಬಿಡುಗಡೆ ಮಾಡಲಾಗುತ್ತದೆ.
ಭಾರತದಲ್ಲಿ 1964 ರಲ್ಲಿ ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡಲಾಯಿತು. ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಚಿತ್ರದ ನಾಣ್ಯ ಇದಾಗಿತ್ತು. ಅವರ ಜನ್ಮ ದಿನಾಚರಣೆಯ ನೆನಪಿಗಾಗಿ ಇದನ್ನು ಬಿಡುಗಡೆ ಮಾಡಲಾಗಿತ್ತು. ಈ ಸ್ಮರಣಾರ್ಥ ನಾಣ್ಯಗಳನ್ನು ಐಜಿ ಮಿಂಟ್ ಕೊಲ್ಕತ್ತಾ,ಐಜಿ ಮಿಂಟ್ ಹೈದರಾಬಾದ್, ಐಜಿ ಮಿಂಟ್ ಮುಂಬೈ ವೆಬ್ಸೈಟ್ ಗೆ ಹೋಗಿ ಖರೀದಿ ಮಾಡಬಹುದು.
ಆನ್ಲೈನ್ ವೆಬ್ಸೈಟ್ ಗಳಲ್ಲಿಯೇ ಈ ನಾಣ್ಯಗಳನ್ನು ಖರೀದಿ ಮಾಡಬಹುದಾಗಿದೆ. ಮುಂಚಿತ ಬುಕ್ಕಿಂಗ್ 3ರಿಂದ6 ತಿಂಗಳ ಮೊದಲೇ ನಡೆಯುತ್ತದೆ. ಮುಂಬೈ ಮಿಂಟ್ ಕಚೇರಿಗೆ ಹೋಗಿ ಅಲ್ಲಿಂದಲೂ ಸ್ಮರಣಾರ್ಥ ನಾಣ್ಯ ಖರೀದಿ ಮಾಡಬಹುದು. ನಾಣ್ಯ ಹಾಗೂ ಅದ್ರ ಬೆಲೆಯನ್ನು ನೊಟೀಸ್ ಬೋರ್ಡ್ ನಲ್ಲಿ ಹಾಕಲಾಗುತ್ತದೆ. ಒಂದೇ ಬಾರಿ 10 ನಾಣ್ಯಗಳನ್ನು ಖರೀದಿ ಮಾಡುವವರು ಪಾನ್ ಕಾರ್ಡ್ ದಾಖಲೆಯಾಗಿ ನೀಡಬೇಕಾಗುತ್ತದೆ.