ಕರಣ್ ಜೋಹರ್ ನಿರ್ದೇಶನದ ಮೊದಲ ಸಿನಿಮಾ ಕುಚ್ ಕುಚ್ ಹೋತಾ ಹೈ. ಈ ಸಿನಿಮಾ ನೋಡಿದ ಅಂದಿನ ಯುವಜನತೆ ಇದರಿಂದ ತುಂಬಾನೇ ಪಾಠ ಕಲಿತಿದ್ರು. ಜೀವನಕ್ಕೊಂದು ಅರ್ಥ ಹುಡುಕುವಂತೆ ಪ್ರೇಕ್ಷಕರನ್ನ ಪ್ರೇರೇಪಿಸಿದ ಸಿನಿಮಾವಿದು. ಇಂತಹ ಅದ್ಭುತ ಸಿನಿಮಾ ತೆರೆಕಂಡು 22 ವರ್ಷಗಳೇ ಕಳೆದಿವೆ.
ಪ್ರೀತಿ ಅಂದರೇನೆ ಸ್ನೇಹ. ಯಾಕಂದ್ರೆ ಸ್ನೇಹವೇ ಇಲ್ಲ ಅಂದ್ಮೇಲೆ ಇಲ್ಲಿ ಪ್ರೀತಿ ಇರೋಕೆ ಸಾಧ್ಯವೇ ಇಲ್ಲ ಅನ್ನೋದನ್ನ ಹೇಳಿಕೊಟ್ಟಿದ್ದು ಕುಚ್ ಕುಚ್ ಹೋತಾ ಹೈ ಸಿನಿಮಾ.
ಯಾವುದೇ ಸಂಬಂಧ ಆರಂಭಕ್ಕೂ ಮುನ್ನ ಅಲ್ಲೊಂದು ಸ್ನೇಹದ ಎಳೆ ಇರಬೇಕು ಅನ್ನೋದನ್ನ ರಾಹುಲ್ ಹಾಗೂ ಅಂಜಲಿ ಪಾತ್ರದ ಮೂಲಕ ಬಹಳ ಸುಂದರವಾಗಿ ತೋರಿಸಿದ್ರು ಕರಣ್ ಜೋಹರ್.
ಚಿತ್ರದಲ್ಲಿ ನಾಯಕಿಯದ್ದು ಗಂಡುಬೀರಿ ಪಾತ್ರ. ಟಾಮ್ ಬಾಯ್ ರೀತಿಯಲ್ಲಿ ನಾಯಕಿಯನ್ನ ತೋರಿಸೋ ಮೂಲಕ ಹೆಣ್ಮಕ್ಕಳು ಹೇಗಿದ್ದರು ಚಂದ. ಅವರು ಹಾಕೋ ಉಡುಗೆ ತೊಡುಗೆ ಅವರ ಗುಣವನ್ನ ನಿರ್ಧರಿಸಲ್ಲ ಅನ್ನೋದನ್ನೂ ಸಾಬೀತು ಪಡಿಸಿತ್ತು ಕುಚ್ ಕುಚ್ ಹೋತಾ ಹೈ.
ಪ್ರೀತಿ ಒಂದು ಬಾರಿ ಮಾತ್ರ ಆಗುತ್ತೆ ಅಂತಾ ಅನೇಕರು ಹೇಳ್ತಾರೆ. ಆದ್ರೆ ಈ ಸಿನಿಮಾ ಮೂಲಕ ಎರಡನೇ ಪ್ರೀತಿಲೀ ಬೀಳೋದ್ರಲ್ಲಿ ತಪ್ಪೇನಲ್ಲಿ ಅಂತಾ ತೋರಿಸಿಕೊಡಲಾಗಿದೆ.
ಜೀವನಕ್ಕೇ ಬೇಕಾದ ಅನೇಕ ಪಾಠಗಳನ್ನ ಕಲಿಸಿಕೊಟ್ಟ ಈ ಅದ್ಭುತ ಸಿನಿಮಾ ಇಂದಿಗೂ ಕೂಡ ಅಭಿಮಾನಿಗಳ ಎದೆಯಲ್ಲಿ ಜೀವಂತವಾಗಿದೆ. ಅಲ್ಲದೇ ಈ ಸಿನಿಮಾದಲ್ಲಿ ನಟಿಸಿದ್ದ ಶಾರೂಖ್ ಕಾನ್, ಕಾಜೊಲ್ ಹಾಗೂ ರಾಣಿ ಮುಖರ್ಜಿಗೆ ಈ ಚಿತ್ರ ಬಾಲಿವುಡ್ನಲ್ಲಿ ದೊಡ್ಡ ಫ್ಲಾಟ್ ಫಾರಂನ್ನೇ ಸೆಟ್ ಮಾಡಿ ಕೊಡ್ತು ಅಂದರೆ ತಪ್ಪಾಗಲಿಕ್ಕಿಲ್ಲ.