ಟಿಆರ್ಪಿ ರೇಟಿಂಗ್ ವರ್ಧನೆಗಾಗಿ ಅಡ್ಡ ಹಾದಿ ಹಿಡಿಯುತ್ತಿದೆ ಎಂದು ರಿಪಬ್ಲಿಕ್ ಟಿವಿ ಮೇಲೆ ಆರೋಪಪಟ್ಟಿ ದಾಖಲಿಸಿರುವ ಮುಂಬೈ ಪೊಲೀಸರ ವಾದಕ್ಕೆ ಪುಷ್ಠಿ ನೀಡಿರುವ ನಾಲ್ವರು ಸಾಕ್ಷಿಗಳು ಈ ಸಂಬಂಧ ಮ್ಯಾಜಿಸ್ಟ್ರೇಟ್ ಎದುರು ತಮ್ಮ ಹೇಳಿಕೆ ದಾಖಲಿಸಿದ್ದಾರೆ.
ತಮ್ಮ ಚಾನೆಲ್ಲುಗಳನ್ನು ಸದಾ ಚಾಲನೆಯಲ್ಲಿಟ್ಟರೆ ನಿಮಗೆ ದುಡ್ಡು ಕೊಡುವುದಾಗಿ ಎರಡು ಟಿವಿ ಚಾನೆಲ್ಗಳು ತಿಳಿಸಿದ್ದವು ಎಂದು ಈ ನಾಲ್ವರು ತಿಳಿಸಿದ್ದು, ಈ ಪ್ರಕರಣದಲ್ಲಿ ಇವರನ್ನು ಸಾಕ್ಷಿಗಳನ್ನಾಗಿ ಪರಿಗಣಿಸಲಾಗುವುದು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ರಿಪಬ್ಲಿಕ್ ಚಾನೆಲ್ ಜೊತೆಗೆ ಬಾಕ್ಸ್ ಸಿನೆಮಾ ಹೆಸರಿನ ಚಾನೆಲ್ ವಿರುದ್ಧವೂ ಸಹ ಟಿಆರ್ಪಿ ಕಾಂಡದ ಆಪಾದನೆ ಇದ್ದು, ಈ ಸಂಬಂಧದ ತನಿಖೆ ಮಹತ್ವದ ಘಟ್ಟದಲ್ಲಿರುವ ಕಾರಣ ಈ ಬಗ್ಗೆ ಮಾಧ್ಯಮಗಳಿಗೆ ಯಾವುದೇ ಬಿಟ್ಸ್ ಕೊಡಲು ಸಾಧ್ಯವಿಲ್ಲ ಎಂದು ಮುಂಬೈ ಪೊಲೀಸ್ ಆಯುಕ್ತ ಪರಂಬೀರ್ ಸಿಂಗ್ ತಿಳಿಸಿದ್ದಾರೆ.