ಪಿಎಫ್ ಖಾತೆಗೆ ಸಂಬಂಧಿಸಿದಂತೆ ಇರುವ ಗೊಂದಲ ನಿವಾರಣೆ ಹಾಗೂ ಮಾಹಿತಿಯನ್ನ ಪಡೆಯಲು ನೆರವಾಗಲಿ ಅಂತಾ ಇಪಿಎಫ್ಒ ನೌಕರರಿಗೆ ಹಾಗೂ ನಿವೃತ್ತಿ ಹೊಂದಿದವರಿಗಾಗಿ ವಾಟ್ಸಾಪ್ ಸಹಾಯವಾಣಿ ಸೇವೆಯನ್ನ ಆರಂಭಿಸಿದೆ. 24 * 7 ಈ ಸೇವೆ ಲಭ್ಯವಿರಲಿದೆ ಎಂದು ಕೇಂದ್ರ ಕಾರ್ಮಿಕ ಸಚಿವಾಲಯ ಮಾಹಿತಿಯನ್ನ ನೀಡಿದೆ.
ಇಪಿಎಫ್ಒ 138 ಪ್ರಾದೇಶಿಕ ಕಚೇರಿಗಳಲ್ಲಿ ಈ ಸೇವೆಯನ್ನ ಆರಂಭಿಸಲಾಗಿದೆ. ಈ ಸೇವೆಯ ಸಹಾಯದಿಂದ ಭವಿಷ್ಯ ನಿಧಿ ಖಾತೆದಾರರು ಮನೆಯಲ್ಲೇ ಕೂತು ತಮ್ಮೆಲ್ಲ ಸಂದೇಹಗಳಿಗೆ ಪರಿಹಾರವನ್ನ ಪಡೆಬಹುದಾಗಿದೆ ಅಂತಾ ಕಾರ್ಮಿಕ ಸಚಿವಾಲಯ ಹೇಳಿದೆ.
ಇಪಿಎಫ್ಒ ಅಧಿಕೃತ ವೆಬ್ಸೈಟ್ ಖಾತೆಗಳಲ್ಲಿ ವಾಟ್ಸಾಪ್ ಸಹಾಯವಾಣಿ ಸೇವೆ ಬಗ್ಗೆ ಮಾಹಿತಿ ಲಭ್ಯವಿದ್ದು ಇಲ್ಲಿ ನೀವು ನಿಮ್ಮ ಪ್ರದೇಶಕ್ಕೆ ಸೀಮಿತವಾದ ವಾಟ್ಸಾಪ್ ನಂಬರ್ನ್ನ ಪಡೆಯಬಹುದಾಗಿದೆ.