ಕಲಬುರಗಿ: ಕೋವಿಡ್-19ರ ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಎನ್.ಎಫ್.ಎಸ್.ಎ. ಹಾಗೂ ಪಿ.ಎಂ.ಜಿ.ಕೆ.ಎ.ವೈ. ಹಂಚಿಕೆಯಡಿ 2020 ರ ಅಕ್ಟೋಬರ್ ಮಾಹೆಯಲ್ಲಿ ಕಲಬುರಗಿ ಜಿಲ್ಲೆಯ ಎಎವೈ, ಪಿ.ಎಚ್.ಎಚ್.(ಬಿ.ಪಿ.ಎಲ್.) ಹಾಗೂ ಎ.ಪಿ.ಎಲ್.(ವಿಲ್ಲಿಂಗ್‍ನೆಸ್) ಪಡಿತರ ಚೀಟಿ ಕಾರ್ಡುದಾರರಿಗೆ ಈ ಕೆಳಗಿನಂತೆ ಪಡಿತರ ಆಹಾರಧಾನ್ಯಗಳನ್ನು ವಿತರಿಸಲಾಗುವುದು.
ಕಲಬುರಗಿ ಜಿಲ್ಲೆಯ 63,546 ಎಎವೈ ಪಡಿತರ ಚೀಟಿಗಳ 2,64,273 ಸದಸ್ಯರಿಗೆ, 4,90,090 ಪಿ.ಎಚ್.ಎಚ್. (ಬಿ.ಪಿ.ಎಲ್.) ಪಡಿತರ ಚೀಟಿಗಳ 16,39,637 ಸದಸ್ಯರಿಗೆ ಹಾಗೂ 14,490 ಎಪಿಎಲ್ (ವಿಲ್ಲಿಂಗ್‍ನೆಸ್) ಪಡಿತರ ಕಾರ್ಡುದಾರರಿಗೆ ಈ ಕೆಳಗಿನಂತೆ ಪಡಿತರ ಚೀಟಿಯನ್ನು ವಿತರಿಸಲಾಗುತ್ತಿದೆ.
ಎಎವೈ/ ಅಂತ್ಯೋದಯ ಅನ್ನ ಪಡಿತರ ಚೀಟಿದಾರರಿಗೆ ಎನ್.ಎಫ್.ಎಸ್.ಎ. ಯೋಜನೆಯಡಿ ಪಡಿತರ ಚೀಟಿಗೆ 35 ಕೆ.ಜಿ. ಅಕ್ಕಿ ಮತ್ತು ಪಿ.ಎಂ.ಜಿ.ಕೆ.ಎ.ವೈ. ಯೋಜನೆಯಡಿ ಪ್ರತಿ ಪಡಿತರ ಚೀಟಿ ಸದಸ್ಯರಿಗೆ 5 ಕೆ.ಜಿ ಅಕ್ಕಿ ಹಾಗೂ ಪ್ರತಿ ಪಡಿತರ ಚೀಟಿಗೆ ಒಂದು ಕೆ.ಜಿ ತೊಗರಿಬೇಳೆ/ ಕಡಲೆಕಾಳು ಉಚಿತವಾಗಿ ವಿತರಿಸಲಾಗುತ್ತದೆ.
ಬಿಪಿಎಲ್/ ಆದ್ಯತಾ ಪಡಿತರ ಚೀಟಿದಾರರಿಗೆ ಎನ್.ಎಫ್.ಎಸ್.ಎ. ಯೋಜನೆಯಡಿ ಪ್ರತಿ ಪಡಿತರ ಚೀಟಿ ಸದಸ್ಯರಿಗೆ 5 ಕೆ.ಜಿ ಅಕ್ಕಿ ಹಾಗೂ ಪಿ.ಎಂ.ಜಿ.ಕೆ.ಎ.ವೈ. ಯೋಜನೆಯಡಿ ಪ್ರತಿ ಪಡಿತರ ಚೀಟಿ ಸದಸ್ಯರಿಗೆ 5 ಕೆ.ಜಿ. ಅಕ್ಕಿ (ಪ್ರತಿ ಸದಸ್ಯರಿಗೆ ಒಟ್ಟು 10 ಕೆ.ಜಿ. ಅಕ್ಕಿ)ಯನ್ನು, ಪ್ರತಿ ಪಡಿತರ ಚೀಟಿಗೆ 2 ಕೆ.ಜಿ. ಗೋಧಿ ಹಾಗೂ ಪ್ರತಿ ಪಡಿತರ ಚೀಟಿಗೆ 01 ಕೆ.ಜಿ. ತೊಗರಿಬೇಳೆ/ ಕಡಲೆಕಾಳು ಉಚಿತವಾಗಿ ವಿತರಿಸಲಾಗುತ್ತದೆ.
ಎಪಿಎಲ್ /ಆದ್ಯತೇತರ (Willingness) ಏಕಸದಸ್ಯ ಇರುವ ಪಡಿತರ ಚೀಟಿಗೆ 5 ಕೆ.ಜಿ. ಅಕ್ಕಿ, ಒಂದಕ್ಕಿಂತ ಹೆಚ್ಚು ಸದಸ್ಯರಿರುವ ಪಡಿತರ ಚೀಟಿಗೆ 10 ಕೆ.ಜಿ. ಅಕ್ಕಿಯನ್ನು ಪ್ರತಿ ಕೆ.ಜಿ.ಗೆ ದರ 15 ರೂ. ರಂತೆ ವಿತರಿಸಲಾಗುತ್ತದೆ.
ಅಂತರರಾಜ್ಯ/ ಅಂತರ ಜಿಲ್ಲೆ ಪೋರ್ಟೆಬಿಲಿಟಿ (Portability) ಜಾರಿಯಲ್ಲಿರುವುದರಿಂದ ಯಾವುದೇ ವರ್ಗದ ಪಡಿತರ ಚೀಟಿಗೆ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ತಿಳಿಸಿದ್ದಾರೆ.