alex Certify ಆನ್ ​ಲೈನ್​ ಕ್ಲಾಸ್ ವೇಳೆ ನಡೆದಿದೆ ಆತಂಕಕಾರಿ ಘಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆನ್ ​ಲೈನ್​ ಕ್ಲಾಸ್ ವೇಳೆ ನಡೆದಿದೆ ಆತಂಕಕಾರಿ ಘಟನೆ

ಉತ್ತರ ಪ್ರದೇಶ ನೋಯ್ಡಾ ಸೆಕ್ಟರ್​​ನಲ್ಲಿ ಶಿಕ್ಷಕರು 50 ಮಂದಿ ವಿದ್ಯಾರ್ಥಿಗಳಿಗೆ ಜೂಮ್​ ಕ್ಲಾಸ್​ನಲ್ಲಿ ಪಾಠ ಮಾಡ್ತಿದ್ದ ವೇಳೆ ಸೈಬರ್​ ಕ್ರಿಮಿನಲ್​​ ತೊಂದರೆ ಕೊಟ್ಟಿದ್ದಾನೆ. ವಿದ್ಯಾರ್ಥಿಗಳನ್ನ ಕೆಟ್ಟ ಭಾಷೆಯಲ್ಲಿ ನಿಂದಿಸಿದ್ದು ಮಾತ್ರವಲ್ಲದೇ ಶಿಕ್ಷಕರಿಗೂ ಕಾಟ ಕೊಟ್ಟಿದ್ದಾನೆ. ಖಾಸಗಿ ಯೂಟ್ಯೂಬ್​ ಚಾನೆಲ್​ ಒಂದು ಈ ವಿಡಿಯೋವನ್ನ ಶೇರ್​ ಮಾಡಿದ್ದು ಸಾವಿರಗಟ್ಟಲೇ ವೀವ್ಸ್ ಪಡೆದುಕೊಂಡಿದೆ.

11ನೇ ತರಗತಿಯ ವಿದ್ಯಾರ್ಥಿನಿಯರಿಗೆ ಸೈಕಾಲಜಿ ತರಗತಿ ನಡೆಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಈ ಘಟನೆ ಬಳಿಕ ಶಿಕ್ಷಕರು ಆನ್​ಲೈನ್​ ತರಗತಿ ನಡೆಸೋಕೆ ಭಯಪಡುವಂತಾಗಿದೆ. ಈ ರೀತಿ ಆನ್​ಲೈನ್​ ಕ್ಲಾಸ್​ ನಡೆಸುವ ವೇಳೆ ಈ ರೀತಿ ಸೈಬರ್​ ಕ್ರೈಂ ಬೆದರಿಕೆ ಬಂದಿರೋದು ಇದೇ ಮೊದಲೇನಲ್ಲ. ಇಂತಹ ಹಲವಾರು ಘಟನೆಗಳು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ವರದಿಯಾಗಿದೆ.

ಮೇಲ್ನೋಟಕ್ಕೆ ಈ ರೀತಿ ಕೃತ್ಯ ನಡೆಸ್ತಾ ಇರೋದು ಖಾಸಗಿ ಯೂ ಟ್ಯೂಬ್​ ಚಾನೆಲ್​ ಮಾಲೀಕನಾ ಎಂಬ ಅನುಮಾನ ಶುರುವಾಗಿದೆ. ಈತ ಇನ್ನೂ ಅನೇಕ ಶಾಲೆಗಳಲ್ಲಿ ಆನ್​ಲೈನ್​ ಕ್ಲಾಸ್​ ನಡೆಸುತ್ತಿದ್ದ ವೇಳೆ ಇದೇ ರೀತಿ ತೊಂದರೆ ಕೊಟ್ಟಿದ್ದಾನೆ ಎಂಬ ಗುಮಾನಿ ಶುರುವಾಗಿದೆ. ಅಲ್ಲದೇ ಈ ರೀತಿ ವಿಡಿಯೋಗಳನ್ನ ತನ್ನ ಚಾನೆಲ್​ನಲ್ಲಿ ಹಾಕಿಕೊಂಡಿರೋ ಆ ವ್ಯಕ್ತಿ ವಿದ್ಯಾರ್ಥಿನಿಯರ ಮುಖವನ್ನೂ ಬ್ಲರ್​ ಮಾಡಿಲ್ಲ. ಈ ವಿಡಿಯೋ ಸಾಕಷ್ಟು ಅಶ್ಲೀಲ ಕಮೆಂಟ್​ಗಳು ಬಂದಿವೆ. ಜೂಮ್​ ಐಡಿ ಪಾಸ್​ವರ್ಡ್​ಗಳನ್ನ ಪಡೆದು ಯೂ ಟ್ಯೂಬ್​ನಲ್ಲಿ ವೀವ್ಸ್ ಹೆಚ್ಚಿಸಿಕೊಳ್ಳಲು ಈ ರೀತಿ ತಂತ್ರ ನಡೆಸಿರೋ ಶಂಕೆ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...