alex Certify 11 ವರ್ಷಗಳ ಬಳಿಕ ಗೂಗಲ್​ ಮ್ಯಾಪ್ ​ನಿಂದ ಒಂದಾದ ಕುಟುಂಬ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

11 ವರ್ಷಗಳ ಬಳಿಕ ಗೂಗಲ್​ ಮ್ಯಾಪ್ ​ನಿಂದ ಒಂದಾದ ಕುಟುಂಬ..!

Abducted Indonesian Teenage Boy Reunites with Family Using Google Map after 11 Years - dailygovjob

ಇಂಡೋನೇಷಿಯಾದ 17 ವರ್ಷದ ಯುವಕನೊಬ್ಬ ಬರೋಬ್ಬರಿ 11 ವರ್ಷಗಳ ಬಳಿಕ ಗೂಗಲ್​ ಮ್ಯಾಪ್​​ನ ಸಹಾಯದಿಂದ ತನ್ನ ಕುಟುಂಬ ಸೇರಿದ್ದಾನೆ.

ಅನಾಥಾಶ್ರಮದಲ್ಲಿದ್ದ ಏರ್ವಾನ್​ ವಾಹ್ಯೂ ಹೆಸರಿನ ಯುವಕ ಚಿಕ್ಕವನಿದ್ದಾಗ ತನ್ನ ಅಜ್ಜಿಯ ಜೊತೆ ಸುತ್ತುತ್ತಿದ್ದ. ಮಾರ್ಕೆಟ್​ಗಳನ್ನ ನೆನಪಿನಲ್ಲಿ ಇಟ್ಟುಕ್ಕೊಂಡಿದ್ದ. ಹೀಗಾಗಿ ಗೂಗಲ್​ ಮ್ಯಾಪ್​ ಸಹಾಯದಿಂದ ಈ ಮಾರ್ಕೆಟ್​​ಗಳನ್ನ ಹುಡುಕಿದ್ದ ಯುವಕ ಆ ಸ್ಥಳದ ಮಾಹಿತಿಯನ್ನ ಕಲೆ ಹಾಕಿದ್ದ. ಬಳಿಕ ಇದೇ ಗೂಗಲ್​ ಮ್ಯಾಪ್ ನೆರವಿನಿಂದ​ ತನ್ನ ಕುಟುಂಬವನ್ನ ಸೇರಿದ್ದಾನೆ.

ಬಾಲಕ 5 ವರ್ಷದವನಿದ್ದಾಗ ವಿಡಿಯೋ ಗೇಮ್​ ಸ್ಟೋರ್​ಗೆ ಬಂದಿದ್ದ. ಈ ವೇಳೆ ಈತನನ್ನ ಯಾರೋ ಅಪಹರಣ ಮಾಡಿದ್ದರು, ಬಳಿಕ ಅಲ್ಲಿ ಇಲ್ಲಿ ಸುತ್ತಾಡ್ತಾ ಇದ್ದ ಏರ್ವಾನ್​ ಕಳೆದ 9 ವರ್ಷಗಳಿಂದ ಅನಾಥಾಶ್ರಮದಲ್ಲಿ ವಾಸಿಸಲು ಆರಂಭಿಸಿದ್ದ.

ಈತನ ಕುಟುಂಬವನ್ನ ಸೇರೋಕೆ ಅನಾಥಾಶ್ರಮ ಕೂಡ ತುಂಬಾನೇ ಸಹಾಯ ಮಾಡಿದೆ. ವಿಡಿಯೋ ಗೇಮಿಂಗ್​ ಶಾಪ್​ ಹಾಗೂ ಮಾರ್ಕೆಟ್​ಗಳ ನೆರವಿನಿಂದ ಇದೀಗ ಏರ್ವಾನ್​ ತನ್ನ ಪೋಷಕರ ಮಡಿಲು ಸೇರಿದ್ದಾನೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...