ದೆಹಲಿಯಲ್ಲಿ ಕೊರೊನಾ ಹಾಗೂ ಲಾಕ್ಡೌನ್ನಿಂದಾಗಿ 7 ತಿಂಗಳುಗಳ ಕಾಲ ಸ್ಥಗಿತಗೊಂಡಿದ್ದ ಸಿನಿಮಾ ಹಾಲ್ಗಳು ಇದೀಗ ಮತ್ತೆ ಓಪನ್ ಆಗಿವೆ. ಸಾಕಷ್ಟು ಮುಂಜಾಗ್ರತಾ ಕ್ರಮಗಳ ಮೂಲಕ ಥಿಯೇಟರ್ಗಳನ್ನ ತೆರೆಯಲಾಗಿದೆ. ಆದರೆ ಬೆರಳಣಿಕೆಯ ಪ್ರೇಕ್ಷಕರು ಮಾತ್ರ ಥಿಯೇಟರ್ನಲ್ಲಿ ಕಾಣಿಸಿಕೊಂಡಿದ್ದಾರೆ.
ದೆಹಲಿಯ ಗ್ರೇಟರ್ ಕೈಲಾಶ್ ಏರಿಯಾದಲ್ಲಿ 150 ಸೀಟ್ಗಳನ್ನ ಹೊಂದಿದ್ದ ಸಿನಿಮಾ ಹಾಲ್ನಲ್ಲಿ ಬೆಳಗ್ಗೆ 11:30ರ ಶೋಗೆ ಕೇವಲ 4 ಟಿಕೆಟ್ ಮಾತ್ರ ಬಿಕರಿಯಾಗಿದೆ. ಮಧ್ಯಾಹ್ನ 2.30ರ ಶೋಗೆ 5 ಸೀಟ್ಗಳು ಬುಕ್ ಆಗಿವೆ.
ಟಿಕೆಟ್ ಖರೀದಿ ಮಾಡಿದ್ದ ಸೌರಬ್ ಎಂಬವರು ಈ ವಿಚಾರವಾಗಿ ಮಾತನಾಡಿ, ನಾನು ನನ್ನ ಫ್ರೆಂಡ್ಸ್ ಜೊತೆ ಥಿಯೇಟರ್ಗೆ ಬಂದಿದ್ದೆ. ಫಿಲಂ ನೋಡೋದಕ್ಕೆ ಅನ್ನೋದಕ್ಕಿಂತ ಹೆಚ್ಚಾಗಿ ಯಾವ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಅನ್ನೋದನ್ನ ನೋಡೋಕೆ ಬಂದಿದ್ದೆವು ಅಂತಾ ಹೇಳಿದ್ದಾರೆ.
ಇನ್ನು ಸಿನಿಮಾ ಹಾಲ್ ಮಾಲೀಕರು ವೀಕೆಂಡ್ನಲ್ಲಿ ಹೆಚ್ಚು ಟಿಕೆಟ್ ಮಾರಾಟವಾಗಬಹುದು ಎಂಬ ನಿರೀಕ್ಷೆಯನ್ನ ಹೊಂದಿದ್ದಾರೆ.