ಅಮೆಜಾನ್ ಹಾಗೂ ಫ್ಲಿಪ್ಕಾರ್ಟ್ ಆನ್ಲೈನ್ ಮಾರ್ಕೆಟ್ಗಳು ಗ್ರಾಹಕರಿಗೆ ಹಬ್ಬದ ಆಫರ್ಗಳನ್ನ ನೀಡೋಕೆ ತಯಾರಿ ನಡೆಸಿವೆ. ಈಗಾಗಲೇ ಗ್ರಾಹಕರನ್ನ ಸೆಳೆಯಲು ಸಾಕಷ್ಟು ಪ್ರಯತ್ನವನ್ನೂ ಪಡ್ತಿವೆ. ಆದರೆ ಯಾವುದೇ ಆಫರ್ಗಳನ್ನೂ ನೀಡೋಕೂ ಮುಂಚೆಯೇ ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಮೊಬೈಲ್ಗಳು ಈ ವರ್ಷ ಖರೀದಿಯಾಗಿವೆಯಂತೆ.
ಕೊರೊನಾ ಹಾಗೂ ಲಾಕ್ಡೌನ್ನಿಂದಾಗಿ ಅಮೆಜಾನ್ ಹಾಗೂ ಫ್ಲಿಪ್ಕಾರ್ಟ್ ಸಾಕಷ್ಟು ನಷ್ಟ ಅನುಭವಿಸಿತ್ತು. ಆದರೆ ಈ ಬಾರಿ ಹಿಂದೆಂದೂ ಮಾರಾಟವಾದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸ್ಮಾರ್ಟ್ ಫೋನ್ಗಳು ಬಿಕರಿಯಾಗಿವೆ.
ಇನ್ನು ಇದೇ ವಿಚಾರವಾಗಿ ಮಾತನಾಡಿದ ಫ್ಲಿಪ್ಕಾರ್ಟ್ ಮೊಬೈಲ್ ವಿಭಾಗದ ಹಿರಿಯ ನಿರ್ದೇಶಕಿ ಆದಿತ್ಯ ಸೋನಿ, ಕಳೆದ ಆರು ತಿಂಗಳಲ್ಲಿ ನಾವು ಆಹ್ಲಾದಕರ ಬೆಳವಣಿಗೆಯನ್ನ ಕಂಡಿದ್ದೇವೆ. ಮೊಬೈಲ್ ಮಾರಾಟದಲ್ಲಿ ಹೆಚ್ಚಿನ ಅಭಿವೃದ್ಧಿ ಕಂಡಿದ್ದೇವೆ ಅಂತಾ ಬೆಂಗಳೂರು ಮೂಲದ ಕಂಪನಿಯೊಂದು ಹೇಳಿಕೊಂಡಿದೆ ಅಂತಾ ಹೇಳಿದ್ರು.
ಅಮೆಜಾನ್ ಮಾರುಕಟ್ಟೆಯಲ್ಲೂ ಇದೇ ರೀತಿಯ ಬೆಳವಣಿಗೆ ಕಂಡುಬಂದಿದೆ. ಈ ವಿಚಾರವಾಗಿ ಮಾತನಾಡಿದ ಅಮೆಜಾನ್ ವಕ್ತಾರ ಗ್ರಾಹಕರು ನಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ ಅಂತಾ ಹೇಳಿದ್ರು.