ಯುವಜನತೆ ಹಾಗೂ ಆರೋಗ್ಯವಂತರು ಕೊರೊನಾ ಲಸಿಕೆಗಾಗಿ 2022ರವರೆಗೆ ಕಾಯಲೇಬೇಕು ಅಂತಾ ಡಬ್ಲೂಹೆಚ್ಓ ಮುಖ್ಯ ವಿಜ್ಞಾನಿ ಹೇಳಿದ್ದಾರೆ.
ವಿಶ್ವದ ಅನೇಕ ರಾಷ್ಟ್ರಗಳು ಕೊರೊನಾ ವಿರುದ್ಧ ಲಸಿಕೆಗಳ ಕ್ಲಿನಿಕಲ್ ಟ್ರಯಲ್ ನಡೆಸುತ್ತಿವೆ. ಕೊರೊನಾಗೆ ಲಸಿಕೆ ಸಿಕ್ಕ ಮೇಲೆ ಅದನ್ನ ಮೊದಲು ಯಾರಿಗೆ ಕೊಡಬೇಕು ಅನ್ನೋದ್ರ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ ಅಂತಾ ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.
ಲಸಿಕೆ ಕಂಡು ಹಿಡಿದ ಮೇಲೆ ಯಾರಿಗೆ ಮೊದಲ ಆದ್ಯತೆ ನೀಡಬೇಕು ಅನ್ನೋದಕ್ಕೆ ಇನ್ನೂ ಮಾರ್ಗಸೂಚಿ ತಯಾರಾಗಿಲ್ಲ. ಆರೋಗ್ಯ ಕಾರ್ಯಕರ್ತರಿಗೆ ಮೊದಲು ನೀಡಬೇಕು ಅನ್ನೋದು ಅನೇಕರ ಅಭಿಪ್ರಾಯವಾಗಿದೆ. ಆದರೆ ಅಪಾಯ ಹಂತದಲ್ಲಿರುವವರು, ವಯಸ್ಸಾದವರನ್ನೂ ನಾವು ಕಡೆಗಣಿಸುವಂತಿಲ್ಲ. ಆದರೆ ನೀವು ಆರೋಗ್ಯವಂತ ಹಾಗೂ ಯುವಜನತೆ ಸಾಲಿನಲ್ಲಿ ಸೇರಿದ್ದರೆ ನೀವು ಲಸಿಕೆಗಾಗಿ 2022ರವರೆಗೆ ಕಾಯಬೇಕಾಗಬಹುದು ಅಂತಾ ಮಾಹಿತಿ ನೀಡಿದ್ರು.
ಅಲ್ಲದೇ 2021ರ ವೇಳೆಗೆ ಕೊರೊನಾಗೆ ಕಡಿಮೆ ಪ್ರಮಾಣದಲ್ಲಾದರೂ ಪರಿಣಾಮಕಾರಿ ಹಾಗೂ ಸುರಕ್ಷಿತ ಲಸಿಕೆಯನ್ನ ನಾವು ಪಡೆಯಲಿದ್ದೇವೆ. ಆದರೆ ಮುಂದಿನ ವರ್ಷ ಈ ಲಸಿಕೆ ಸೀಮಿತ ಪ್ರಮಾಣದಲ್ಲಿ ಮಾತ್ರ ಲಭ್ಯವಿರೋ ಸಾಧ್ಯತೆ ಇದೆ ಅಂತಾ ಅನುಮಾನ ವ್ಯಕ್ತಪಡಿಸಿದ್ರು.