alex Certify ಬಹುಮಹಡಿ ಕಟ್ಟಡದಲ್ಲಿ ಯುವಕರ ಹುಚ್ಚಾಟ: ಪೊಲೀಸರಿಂದ ಆರೋಪಿಗಳಿಗಾಗಿ ಶೋಧ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಹುಮಹಡಿ ಕಟ್ಟಡದಲ್ಲಿ ಯುವಕರ ಹುಚ್ಚಾಟ: ಪೊಲೀಸರಿಂದ ಆರೋಪಿಗಳಿಗಾಗಿ ಶೋಧ…!

ಬಹುಮಹಡಿ ಕಟ್ಟಡ ಏರಿದ ಯುವಕನೊಬ್ಬ ಡೆಡ್ಲಿ ಸ್ಟಂಟ್​ಗಳನ್ನ ಮಾಡಿ ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಟ್ಟಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ  ವೈರಲ್​ ಆಗ್ತಿದ್ದಂತೆ ಮುಂಬೈ ಪೊಲೀಸರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.

22 ಮಹಡಿ ಕಟ್ಟಡವನ್ನೇರಿದ ಯುವಕನೊಬ್ಬ ಮೊದಲು ಎನರ್ಜಿ ಡ್ರಿಂಕ್​ ಕುಡೀತಾನೆ. ಬಳಿಕ ಬಹುಮಹಡಿ ಕಟ್ಟಡದ ತುದಿಯಲ್ಲಿ ನಿಂತು ಜಂಪ್​ ಮಾಡೋದು, ತಲೆ ಕೆಳಗಾಗಿ ನಿಂತು ಡೆಡ್ಲಿ ಸಾಹಸ ಪ್ರದರ್ಶಿಸಿದ್ದಾನೆ. ಈತನ ಇಬ್ಬರು ಸ್ನೇಹಿತರು ಈ ವಿಡಿಯೋವನ್ನ ಚಿತ್ರೀಕರಿಸಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ಈ ವಿಡಿಯೋ ಹರಿದಾಡ್ತಾ ಇದ್ದಂತೆ ಮುಂಬೈ ಪೊಲೀಸರು ಅಲರ್ಟ್ ಆಗಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಇನ್ನು ಈ ವಿಚಾರವಾಗಿ ಮಾತನಾಡಿದ ಕಂಡಿವಲಿ ಠಾಣೆಯ ಪೊಲೀಸ್​ ರವಿ ಅದಾನೆ, ಜೈ ಭಾರತ್​ ಬಿಲ್ಡಿಂಗ್​ನಲ್ಲಿ ಕಿಡಿಗೇಡಿಗಳು ಈ ಸಾಹಸ ಪ್ರದರ್ಶಿಸಿದ್ದಾರೆ. ಸದ್ಯ ಮೂವರು ಆರೋಪಿಗಳು ಯಾರೆಂದು ಗುರುತಿಸಲಾಗಿದ್ದು ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಅಂತಾ ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...