ಪ್ರಧಾನ ಮಂತ್ರಿ ನರೇಂದ್ರ ಮೋದಿ ನಿವ್ವಳ ಆಸ್ತಿಯಲ್ಲಿ ಈ ವರ್ಷ ಹೆಚ್ಚಳವಾಗಿದೆ. ಸ್ಥಿರಾಸ್ತಿಯಲ್ಲಿ ಯಾವುದೇ ಏರಿಕೆ ಕಂಡು ಬಂದಿಲ್ಲ. ನಿವ್ವಳ ಆಸ್ತಿ ಹೆಚ್ಚಳಕ್ಕೆ ಕಾರಣವಾಗಿದ್ದು ಪಿಎಂ ಮೋದಿ ಹೂಡಿಕೆ ಆಯ್ಕೆಯಾಗಿದೆ.
ನರೇಂದ್ರ ಮೋದಿ ಎಸ್ ಬಿ ಐ ಬ್ಯಾಂಕ್ ನಲ್ಲಿ ಸ್ಥಿರ ಠೇವಣಿಯಿಟ್ಟಿದ್ದಾರೆ. ಸ್ಥಿರ ಠೇವಣಿಗಳು ಆದಾಯದ ಉತ್ತಮ ಮೂಲ. ಇದ್ರಲ್ಲಿ ಅಪಾಯ ಕಡಿಮೆ. ಹೆಚ್ಚಿನ ಬಡ್ಡಿ ನೀಡುವ ಬ್ಯಾಂಕ್ ನಲ್ಲಿ ಸ್ಥಿರ ಠೇವಣಿಯಿಡುವುದು ಒಳ್ಳೆಯ ಆಯ್ಕೆಯಲ್ಲಿ ಒಂದು.
ನರೇಂದ್ರ ಮೋದಿ, 43,124 ರೂಪಾಯಿಗಳ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಹೊಂದಿದ್ದಾರೆ. ಇದ್ರಲ್ಲೂ ಅಪಾಯ ಕಡಿಮೆ. ಉತ್ತಮ ಹೂಡಿಕೆ ಆಯ್ಕೆಯಾಗಿದೆ. ಎನ್‌ಎಸ್‌ಸಿ ವಾರ್ಷಿಕವಾಗಿ ಶೇಕಡಾ 6.8 ರಷ್ಟು ಬಡ್ಡಿ ದರವನ್ನು ನೀಡುತ್ತದೆ. ಆದರೆ ಅವಧಿ ಪೂರ್ಣಗೊಂಡ ನಂತ್ರ ಹಣ ನೀಡಲಾಗುತ್ತದೆ. ಇದು ತೆರಿಗೆ ರಿಯಾಯಿತಿಗೆ ಅರ್ಹತೆ ಪಡೆದಿವೆ.
ಮೋದಿ 1,50,957 ರೂಪಾಯಿಗಳ ಜೀವ ವಿಮಾ ಪಾಲಿಸಿ ಹೊಂದಿದ್ದಾರೆ. ಉತ್ತಮ ಜೀವ ವಿಮಾ ಯೋಜನೆಯು ಅನೇಕ ಸಂದರ್ಭಗಳಲ್ಲಿ ನಮಗೆ ನೆರವಾಗುತ್ತದೆ. ಇದ್ರಿಂದ ಗ್ರಾಹಕ ಉತ್ತಮ ಲಾಭವನ್ನು ಕೂಡ ಪಡೆಯಬಹುದು. ಜೀವ ವಿಮಾ ಪಾಲಿಸಿಗಳು ಉತ್ತಮ ತೆರಿಗೆ ಉಳಿತಾಯ ವಿಧಾನವಾಗಿದೆ.
ಪಿಎಂ ಮೋದಿ 20,000 ರೂಪಾಯಿ ಮೌಲ್ಯದ ತೆರಿಗೆ ಉಳಿತಾಯ ಇನ್ಫ್ರಾ ಬಾಂಡ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ. ತೆರಿಗೆ ಪಾವತಿದಾರರು ಸೆಕ್ಷನ್ 80 ಸಿಸಿಎಫ್ ಅಡಿಯಲ್ಲಿ ಸರ್ಕಾರದಿಂದ ಅನುಮೋದಿತ ಮೂಲಸೌಕರ್ಯ ಬಾಂಡ್‌ಗಳಲ್ಲಿ ಹೂಡಿಕೆ ಮಾಡುವ ಮೂಲಕ ತೆರಿಗೆ ಉಳಿತಾಯ ಪ್ರಯೋಜನಗಳನ್ನು ಪಡೆಯಬಹುದು. ಉತ್ತಮ ಹೂಡಿಕೆ ಗಳಿಕೆಗೆ ಸಹಾಯ ಮಾಡುತ್ತದೆ. ಹೂಡಿಕೆ ಆಯ್ಕೆ ಮಾಡುವಾಗ ತಜ್ಞರ ಸಲಹೆ ಪಡೆದಲ್ಲಿ ಹೆಚ್ಚಿನ ಗಳಿಕೆ ಮಾಡಬಹುದು.