25 ವರ್ಷದ ಡ್ರಗ್ ವ್ಯಸನಿಯೊಬ್ಬ ತನ್ನ 80 ವರ್ಷದ ಅಜ್ಜಿಯನ್ನ ವಿಕೃತವಾಗಿ ಸಾಯಿಸಿದ ಘಟನೆ ಮುಂಬೈನಲ್ಲಿ ನಡೆದಿದೆ. ಡ್ರಗ್ ವ್ಯಸನಿಯಾಗಿದ್ದ ಕ್ರಿಸ್ಟೋಫರ್ ಡಯಾಸ್ ಎಂಬಾತ ತನ್ನ ಅಜ್ಜಿಯ ತಲೆ ಕತ್ತರಿಸಿ ಸಾಯಿಸಿದ್ದಾನೆ.
ರೋಸಿ ಡಯಾಸ್ ಎಂಬ ವೃದ್ಧೆಯ ತಲೆ ತುಂಡರಿಸಿದ ಡಯಾಸ್ ಅದನ್ನ ಮನೆಯ ಡೈನಿಂಗ್ ಟೇಬಲ್ ಮೇಲೆ ಇಟ್ಟಿದ್ದಾನೆ. ಆಗ ಆಕೆಯ ದೇಹದ ಇತರೆ ಭಾಗಗಳನ್ನ ಮನೆಯ ಸುತ್ತೆಲ್ಲ ಬಿಸಾಡಿದ್ದಾನೆ. ಈ ರೀತಿಯ ಕೃತ್ಯ ಎಸಗಿ ಗೋವಾದಲ್ಲಿದ್ದ ತನ್ನ ತಂದೆಗೆ ಕರೆ ಮಾಡಿ ತಪ್ಪೊಪ್ಪಿಕ್ಕೊಂಡಿದ್ದಾನೆ. ಕೂಡಲೇ ಫ್ಲೈಟ್ ಮೂಲಕ ತಂದೆ ಮನೆಗೆ ಬಂದಿದ್ದಾರೆ. ರಕ್ತದ ಮಡುವಿನಲ್ಲಿ ಕುಳಿತಿದ್ದ ಮಗನನ್ನ ನೋಡಿದ ತಂದೆ ಬೆಚ್ಚಿಬಿದ್ದಿದ್ದಾರೆ.
ಸದ್ಯ ಆರೋಪಿಯನ್ನ ಅಕ್ಟೋಬರ್ 17ರವರೆಗೆ ಪೊಲೀಸ್ ಕಸ್ಟಡಿಯಲ್ಲಿ ಇಡಲಾಗಿದೆ ಅಂತಾ ಡೆಪ್ಯೂಟಿ ಕಮಿಷನರ್ ಅಭಿಷೇಕ್ ತ್ರಿಮುಖೆ ತಿಳಿಸಿದ್ದಾರೆ.
ಡ್ರಗ್ ವ್ಯಸನಿಯಾಗಿದ್ದ ಕ್ರಿಸ್ಟೋಫರ್ ನನ್ನ ಕಳೆದ 18 ತಿಂಗಳಿನಿಂದ ಡ್ರಗ್ ವ್ಯಸನ ಮುಕ್ತ ಕೇಂದ್ರಕ್ಕೆ ಸೇರಿಸಲಾಗಿತ್ತು. ಆದರೆ ವ್ಯಸನ ಕೇಂದ್ರದಲ್ಲಾದ 6 ಲಕ್ಷ ರೂಪಾಯಿ ಬಿಲ್ನ್ನ ಪಾವತಿಸಲು ಪೋಷಕರು ಅಶಕ್ತರಾದ ಕಾರಣ ಕೇಂದ್ರದಿಂದ ವಾಪಸ್ ಕಳಿಸಲಾಗಿತ್ತು. ಹೀಗಾಗಿ ಈತನನ್ನ ಮುಂಬೈನಲ್ಲಿದ್ದ ಅಜ್ಜಿ ಮನೆಯಲ್ಲಿ ಇರಿಸಲಾಗಿತ್ತು.