ಗೋಡ್ವಿಟ್ ಜಾತಿಗೆ ಸೇರಿದ ಹಕ್ಕಿ ಸತತ 11 ದಿನಗಳ ಕಾಲ 12,200 ಕಿಲೋ ಮೀಟರ್ ತಡೆ ರಹಿತ ಹಾರಾಟ ನಡೆಸೋದ್ರ ಮೂಲಕ ವಿಶ್ವದಾಖಲೆ ಬರೆದಿದೆ. ಗೋಡ್ವಿಟ್ ಹಕ್ಕಿಗೆ 5 ಗ್ರಾಂ ತೂಕದ ಉಪಗ್ರಹವನ್ನ ಕಟ್ಟಿದ ವಿಜ್ಞಾನಿಗಳು ಅದರ ಸಹಾಯದಿಂದ ಹಕ್ಕಿಯ ಹಾರಾಟವನ್ನ ಟ್ರ್ಯಾಕ್ ಮಾಡಿದ್ದಾರೆ.
ಸೆಪ್ಟೆಂಬರ್ 16ರಂದು ಅಮೆರಿಕದ ನೈಋತ್ಯ ಅಲಾಸ್ಕಾದಿಂದ ಹಾರಾಟ ಪ್ರಾರಂಭಿಸಿದ ಈ ಹಕ್ಕಿ 11 ದಿನ ಕಳೆಯುವಷ್ಟರಲ್ಲಿ ನ್ಯೂಜಿಲೆಂಡ್ನ ಆಕ್ಲೆಂಡ್ಗೆ ಬಂದು ತಲುಪಿದೆ ಅಂತಾ ಪತ್ರಿಕೆಗಳು ವರದಿ ಮಾಡಿವೆ.
ತನ್ನ ಅತಿ ದೀರ್ಘದ ಹಾರಾಟದ ಮೂಲಕ ಗೋಡ್ವಿಟ್ ಹಕ್ಕಿ ಈ ಹಿಂದೆ ಅಂದರೆ 2007ರಲ್ಲಿ 11,680 ಕಿಲೋಮೀಟರ್ ಕ್ರಮಿಸಿದ್ದ ಹೆಣ್ಣು ಶೋರ್ಬರ್ಡ್ ಹಕ್ಕಿಯ ದಾಖಲೆಯನ್ನ ಮುರಿದು ಹಾಕಿದೆ.
ವೈಜ್ಞಾನಿಕವಾಗಿ ಸಾಬೀತಾಗದೇ ಇದ್ದರೂ ಸಹ ಈ ಗಾಡ್ವಿಟ್ ಪಕ್ಷಿಗಳು ತಮ್ಮ ಪ್ರಯಾಣ ಕಾಲದಲ್ಲಿ ನಿದ್ರೆ ಮಾಡುವುದಿಲ್ಲವಂತೆ. ಹೀಗಾಗಿ ಇವುಗಳು ನಿರಂತರವಾಗಿ ಹಾರಾಟ ನಡೆಸುತ್ತಲೇ ಇರುತ್ತವೆ. ಅದರಲ್ಲೂ ಗಂಡು ಗೋಡ್ವಿಟ್ ಹಕ್ಕಿ ಹಾರಾಟದ ವೇಳೆ ತನ್ನ ದೇಹದ ಆಂತರಿಕ ಅಂಗಗಳನ್ನ ಕುಗ್ಗಿಸೋ ಸಾಮರ್ಥ್ಯವನ್ನ ಹೊಂದಿದೆ. ಇದರಿಂದಾಗಿ ಗೋಡ್ವಿಟ್ ಇನ್ನಷ್ಟು ವೇಗವಾಗಿ ಚಲ್ಲಿಸಬಲ್ಲದು.
ಗೋಡ್ವಿಟ್ ಹಕ್ಕಿಗಳ ದೇಹ ವಿನ್ಯಾಸ ಜೆಟ್ ಫೈಟರ್ಗಳ ರೀತಿ ಇರುತ್ತೆ ಅಂತಾರೆ ಗ್ಲೋಬಲ್ ಫ್ಲೈ ವೇ ನೆಟ್ವರ್ಕ್ನ ಡಾ. ಜೆಸ್ಸಿ ಕಾಂಕ್ಲೀನ್. ಇವುಗಳ ಉದ್ದನೆಯ ಮೊನಚಾದ ರೆಕ್ಕೆಗಳು ಹಾಗೂ ಅದರ ವಿನ್ಯಾಸ ಈ ಹಕ್ಕಿಯ ನಿರಂತರ ಹಾರಾಟಕ್ಕೆ ಪೂರಕವಾಗಿದೆ ಅಂತಾ ಹೇಳಿದ್ರು.