ಯಾಹೂ ಬಳಕೆದಾರರೇ ನಿಮಗಿದೋ ಮಹತ್ವದ ಸುದ್ದಿ. 2001ರಿಂದ ಸೇವೆ ನೀಡುತ್ತಾ ಬಂದಿದ್ದ ಯಾಹೂ ಗ್ರೂಪ್ ಡಿಸೆಂಬರ್ ವೇಳೆಗೆ ಕಾರ್ಯ ಸ್ಥಗಿತ ಮಾಡಲಿದೆಯಂತೆ. ಈ ಕುರಿತು ಅಮೇರಿಕಾ ಬಹುರಾಷ್ಟ್ರೀಯ ದೂರ ಸಂಪರ್ಕ ಕಂಪನಿ ವೆರಿಜಾನ್ ಸ್ಪಷ್ಟನೆ ನೀಡಿದೆ. ಈ ಯಾಹೂ ಗ್ರೂಪ್ ಅನ್ನು 2017ರಲ್ಲಿ ಖರೀದಿಸಿತ್ತು ವೆರಿಜಾನ್.
ಇಷ್ಟು ವರ್ಷಗಳ ಕಾಲ ಸೇವೆ ನೀಡಿದ್ದ ಯಾಹೂ ಸಂಸ್ಥೆ ಮುಚ್ಚಲು ಕಾರಣ ಬಳಕೆದಾರರ ಸಂಖ್ಯೆಯಲ್ಲಿ ಇಳಿಮುಖವಾಗಿರುವುದು. ಹಲವು ವರ್ಷಗಳಿಂದ ಯಾಹೂ ಬಳಸುವವರು ಕಡಿಮೆಯಾಗಿದ್ದಾರೆ ಎನ್ನಲಾಗಿದೆ. ಬಳಕೆದಾರರ ಸಂಖ್ಯೆಯಲ್ಲಿ ಇಳಿಮುಖ ಕಂಡ ಬೆನ್ನಲ್ಲೇ ಇದೀಗ ಸೇವೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.
ಇನ್ನು ಡಿಸೆಂಬರ್ 15ರ ನಂತರ ಯಾಹೂ ಗ್ರೂಪ್ ಯಾವುದೇ ಇಮೇಲ್ ಕಳುಹಿಸಲು ಸಾಧ್ಯವಾಗುವುದಿಲ್ಲ. ಹಾಗೆಯೇ ಇಮೇಲ್ ರಿಸೀವ್ ಕೂಡ ಆಗುವುದಿಲ್ಲ. ಇನ್ನು ಹಳೆಯ ಇಮೇಲ್ಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ. ಅವೆಲ್ಲ ಹಾಗೆಯೇ ಉಳಿಯಲಿವೆ ಎಂದು ಹೇಳಲಾಗುತ್ತಿದೆ.