alex Certify BIG NEWS: ಸುಶಾಂತ್​ ಸಿಂಗ್ ರಜಪೂತ್​ ಕೇಸ್​ನಲ್ಲಿ ಸಿಬಿಐ ತನಿಖೆ ಪೂರ್ಣ…? ಸದ್ಯದಲ್ಲೆ ಚಾರ್ಜ್‌ ಶೀಟ್‌ ಸಲ್ಲಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸುಶಾಂತ್​ ಸಿಂಗ್ ರಜಪೂತ್​ ಕೇಸ್​ನಲ್ಲಿ ಸಿಬಿಐ ತನಿಖೆ ಪೂರ್ಣ…? ಸದ್ಯದಲ್ಲೆ ಚಾರ್ಜ್‌ ಶೀಟ್‌ ಸಲ್ಲಿಕೆ

ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ತಮ್ಮ ಬಾಂದ್ರಾ ನಿವಾಸದಲ್ಲಿ ಶವವಾಗಿ ಪತ್ತೆಯಾಗಿ 4 ತಿಂಗಳುಗಳೇ ಕಳೆದಿದೆ. ನಟ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತಾ ಮೊದಲು ಹೇಳಲಾಗಿತ್ತಾದರೂ ಬಳಿಕ ಕುಟುಂಬಸ್ಥರು ಹಾಗೂ ಫ್ಯಾನ್ಸ್​ಗಳ ಒತ್ತಾಯದ ಮೇರೆಗೆ ಪ್ರಕರಣದ ತನಿಖೆಯನ್ನ ಸಿಬಿಐ ಹೆಗಲಿಗೆ ಏರಿಸಲಾಗಿತ್ತು.

ಮೂಲಗಳ ಪ್ರಕಾರ ಸೆಂಟ್ರಲ್​ ಬ್ಯುರೋ ಆಫ್​ ಇನ್ವೆಸ್ಟಿಗೇಷನ್​ ಪ್ರಕರಣ ಸಂಬಂಧ ಎಲ್ಲಾ ಆಯಾಮಗಳಲ್ಲಿ ತನಿಖೆ ಪೂರ್ಣಗೊಳಿಸಿದ್ದಾರೆ ಎನ್ನಲಾಗಿದ್ದು ಸದ್ಯದಲ್ಲೇ ಚಾರ್ಜ್​ಶೀಟ್​ ಸಲ್ಲಿಕೆ ಮಾಡಲಿದ್ದಾರೆ.

ತನಿಖೆ ಪೂರ್ಣಗೊಳಿಸಲಿರುವ ಸಿಸಿಬಿ ದೋಷಾರೋಪ ಪಟ್ಟಿಯನ್ನ ಪಾಟ್ನಾದ ಸಿಬಿಐ ನ್ಯಾಯಾಲಯಕ್ಕೆ ಸಲ್ಲಿಸುವ ಸಾಧ್ಯತೆ ಇದೆ. ಸುಶಾಂತ್​ ಸಿಂಗ್​ ಪ್ರಕರಣ ಸಂಬಂಧ ವಿಚಾರಣೆ ಎದುರಿಸಿದ್ದ ನಟಿ ರಿಯಾ ಚಕ್ರವರ್ತಿ ಡ್ರಗ್​ ಸೇವನೆ ಕೇಸ್​ನ ಆರೋಪ ಎದುರಿಸುತ್ತಿದ್ದಾರೆ.

ಸುಶಾಂತ್​ ಸಿಂಗ್​​ ಸಾವಿನ ಪ್ರಕರಣದ ತನಿಖೆ ಜವಾಬ್ದಾರಿಯನ್ನ ಮೊದಲು ಮುಂಬೈ ಪೊಲೀಸರ ಹೆಗಲಿಗೆ ಏರಿಸಲಾಗಿತ್ತು. ಆದರೆ ಇದಕ್ಕೆ ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆ ಸಿಬಿಐ ಪ್ರಕರಣದ ತನಿಖೆ ಮುಂದುವರಿಸಿತ್ತು.

ಸಿಬಿಐ ತನಿಖೆ ನಡೆಯುತ್ತಿರುವಾಗಲೇ ಜಾರಿ ನಿರ್ದೇಶನಾಲಯ ಕೂಡ ಸುಶಾಂತ್​ ಗೆಳತಿ ರಿಯಾ ಚಕ್ರವರ್ತಿ ಕುಟುಂಬವನ್ನ ತನಿಖೆಗೊಳಪಡಿಸಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...