ಕೂದಲು ಉದುರುವ ಸಮಸ್ಯೆಗೆ ಹಲವರು ಹಲವು ರೀತಿಯ ಔಷಧಗಳನ್ನು ಕಂಡು ಹಿಡಿದುಕೊಂಡಿರಬಹುದು. ಇದಕ್ಕೆ ಹಲವು ಮನೆ ಮದ್ದುಗಳಿವೆ ಎಂಬುದೂ ನಿಜ. ಅವುಗಳ ಪೈಕಿ ಒಂದನ್ನು ನಾವಿಲ್ಲಿ ತಿಳಿಯೋಣ.
ಬೆಟ್ಟದ ನೆಲ್ಲಿಕಾಯಿಯನ್ನು ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳಿ. ಮಳಿಗೆಗಳಲ್ಲಿ ಸಿಗುವ ಕೆಮಿಕಲ್ ಮಿಕ್ಸ್ ಪೌಡರ್ ಗಿಂತ ಮನೆಯಲ್ಲೇ ತಯಾರಿಸಿದ ಪುಡಿ ಬಳಸುವುದು ಅತ್ಯುತ್ತಮ. ಇದನ್ನು ಸಣ್ಣ ಉರಿಯಲ್ಲಿಟ್ಟು ಬಿಸಿ ಮಾಡಿ ಕೆಳಗಿಡಿ.
ಕಾಮಕಸ್ತೂರಿ ಬೀಜವನ್ನೂ ಬಿಸಿ ಮಾಡಿ. ಅದು ಎಣ್ಣೆ ಬಿಡುತ್ತಲೇ ನೀರು ಬೆರೆಸಿ ರಾತ್ರಿಯಿಡೀ ಮುಚ್ಚಿಡಿ. ಬೆಳಗ್ಗೆ ನೋಡಿದರೆ ಅದು ಊದಿಕೊಂಡಿರುತ್ತದೆ. ಆಗ ಅದನ್ನು ಸೋಸಿ. ನೀರು ಬೇರ್ಪಡುತ್ತದೆ. ಅದನ್ನು ಗಾಜಿನ ಬಾಟಲಿಯಲ್ಲಿ ಹಾಕಿ ತೆಗೆದಿಡಿ. ಇದನ್ನು ಕೆಲವು ದಿನಗಳ ಕಾಲ ತಲೆಗೆ ಹಚ್ಚಿಕೊಳ್ಳಬಹುದು.
ಉಳಿದ ಕಾಮಕಸ್ತೂರಿ ಬೀಜವನ್ನು ಮಿಕ್ಸಿಯಲ್ಲಿ ರುಬ್ಬಿ, ನೆಲ್ಲಿಕಾಯಿ ಪುಡಿ ಸೇರಿಸಿ ತಲೆಗೆ ಹಚ್ಚಿಕೊಳ್ಳಿ. ಎರಡು ದಿನಕ್ಕೊಮ್ಮೆ ಹಚ್ಚಿ 30 ನಿಮಿಷದ ಬಳಿಕ ತಲೆ ತೊಳೆಯಿರಿ. ಈ ಮಿಕ್ಸ ಅನ್ನು ಹತ್ತು ದಿನಗಳ ಕಾಲ ಫ್ರಿಜ್ ನಲ್ಲಿ ಇಡಬಹುದು. ಇದರ ಬಳಕೆಯಿಂದ ಕೂದಲು ಉದುರುವುದು ನಿಂತು ಉದ್ದ ಬೆಳೆಯುತ್ತದೆ. ಕೂದಲು ಮೃದುವಾಗುತ್ತದೆ.